ಮನುಷ್ಯನಿಗೆ ಆರೋಗ್ಯವೊಂದಿದ್ದರೆ ಎಲ್ಲಾ ಸಂಪತ್ತು ಸಿಕ್ಕಂತೆಯೇ ಸರಿ. ದೇಹದಲ್ಲಿ ಯಾವುದೇ ಭಾಗ ಡ್ಯಾಮೇಜ್ ಆದರೂ ನೋವು ಸಹಿಸುವುದು ಸುಲಭವಲ್ಲ. ಅದರಲ್ಲೂ ಈಗಿನ ಆಹಾರ ಪದ್ಧತಿಯೆಲ್ಲಾ ನೋಡುತ್ತಿದ್ದರೆ ದೇಹದ ಅಂಗಾಂಗಗಳನ್ನು ಬಹಳ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಅದರಲ್ಲೂ ಲಿವರ್.
ಲಿವರ್ ಹಾಳಾಗಬಾರದು, ಉತ್ತಮ ಆರೋಗ್ಯದಿಂದ ಇರಬೇಕು ಎಂದಾದರೂ ಒಂದಷ್ಟು ಪ್ರೋಟಿನ್ ಅನ್ನು ಅದಕ್ಕೆ ನೀಡಲೇಬೇಕಾಗುತ್ತದೆ. ಅದರಲ್ಲೂ ಮನೆಯಲ್ಲಿಯೇ ಸಿಗುವ, ಅಡುಗೆ ಮನೆಯಲ್ಲಿ ಯಾವಾಗಲೂ ಇರುವ, ಹಿತ್ತಲಲ್ಲಿ ಬೆಳೆದಿರುವ ಕರಿಬೇವಿನಿಂದ ಲಿವರ್ ಅನ್ನು ಸಂಪಾಗಿ ಇಟ್ಟುಕೊಳ್ಳಬಹುದು.
ಕರಿಬೇವನ್ನು ಪ್ರತಿನಿತ್ಯ ಬಳಕೆ ಮಾಡುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ. ಕರಿಬೇವು ತಿನ್ನುವುದರಿಂದ ಲಿವರ್ ನ ಒಂದು ಭಾಗದಲ್ಲಿ ವಿಷಕಾರಿ ತ್ಯಾಜ್ಯ ಶೇಖರಣೆಯಾಗುವುದನ್ನು ತಪ್ಪಿಸುತ್ತದೆ.
ಕರಿಬೇವಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹೆಚ್ಚಾಗಿರುವ ಕಾರಣ ಲಿವರ್ ಆರೋಗ್ಯವಾವಿರುವಂತೆ ಕಾಪಾಡುತ್ತದೆ. ಯಾವುದೇ ರೀತಿಯ ಹಾನಿಯಾಗುವುದಕ್ಕೆ ಬಿಡುವುದಿಲ್ಲ.
ಯಾವ ರೀತಿಯ ಜ್ಯೂಸ್ ಮಾಡಬೇಕು ಎಂಬ ಸಲಹೆ ಇಲ್ಲಿದೆ : ಒಂದು ಗ್ಲಾಸ್ ಗೆ ಒಂದು ಟೀ ಚಮಚದಷ್ಟು ಕಾಯಿಸಿದ ತುಪ್ಪ ಹಾಕಿ. ಅದಕ್ಕೆ ಕರಿಬೇವಿನ ಜ್ಯೂಸ್ ಸೇರಿಸಿ. ಅರ್ಧ ಟೀ ಚಮಚ ಸಕ್ಕರೆ, ಕಾಳು ಮೆಣಸು ಹಾಕಿ, ಕಡಿಮೆ ಉರಿಯಲ್ಲಿ ಇದೆಲ್ಲಾ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ, ಬಿಸಿ ಇದ್ದಾಗಲೇ ಸೇವಿಸಿ. ಲಿವರ್ ಗೆ ತುಂಬಾ ಒಳ್ಳೆಯದ್ದು.