ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಜಿಲ್ಲೆಗೆ ಭೇಟಿ ನೀಡಿದ್ದಾರೆ.. ಕಳೆದ 28 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಂದು ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ. ಮೈ ಶುಗರ್ ಕಾರ್ಖಾನೆಯ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಅವರ ವಿರುದ್ಧವೂ ಗುಡುಗಿದ್ದಾರೆ.
ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೆ ಆರಂಭವಾಗಬೇಕೆಂದು ಹೇಳಿರುವ ಸಿದ್ದರಾಮಯ್ಯ ಅವರು, ನಾನು ಜೆಡಿಎಸ್ ಬಗ್ಗೆ ಮಾತಾಡೋದೆ ಇಲ್ಲ. ಆದ್ರೂ ಕುಮಾರಸ್ವಾಮಿ ಅವರೆರ ಕಾಲು ಕೆರೆದುಕೊಂಡು ಬರ್ತಾರೆ ನಾನೇನು ಮಾಡ್ಲಿ ಎಂದಿದ್ದಾರೆ.
ನಾನು ದೇವೇಗೌಡ ಅವರ ಬಗ್ಗೆಯಾಗಲಿ.. ಕುಮಾರಸ್ವಾಮಿ ಅವರ ಬಗ್ಗೆಯಾಗಲಿ ಮಾತನಾಡೋದನ್ನ ಬಿಟ್ಟಿದ್ದೇನೆ. ಟೀಕೆ ಮಾಡ್ಕೊಂಡ್ರೆ ಮಾಡಿಕೊಳ್ಳಲಿ.. ಮಂಡ್ಯದಲ್ಲಿ ನಾವೂ ಅಭ್ಯರ್ಥಿ ಹಾಕಿರಲಿಲ್ಲ.. ಮಂಡ್ಯದಲ್ಲಿ ಜೆಡಿಎಸ್ ವೀಕ್ ಅಗಿದೆ. ಸ್ಟ್ರಾಂಗ್ ಇದ್ದಿದ್ರೆ ಸೋಲ್ತಾ ಇದ್ರಾ..? ಅಲ್ಲಿ ಎಷ್ಟು ಎಂಎಲ್ಎ ಗಳಿದ್ದಾರೆ..? ಎಷ್ಟು ಅಂತರದಲ್ಲಿ ಸೋತಿದ್ದಾರೆ ಅನ್ನೋದು ಗೊತ್ತಿರೋದೆ ಎಂದು ನಿಖಿಲ್ ಕುಮಾರ್ ಸೋತ ಬಗ್ಗೆ ನೆನಪಿಸಿಕೊಂಡಿದ್ದಾರೆ.