ಹಸಿ ತರಕಾರಿ ತಿನ್ನುವುದರಿಂದ ಸಾಕಷ್ಟು ಪ್ರೋಟೀನ್ ದೇಹಕ್ಕೆ ಸಿಗುತ್ತದೆ. ಬೇಯಿಸಿದಾಗ ಸಿಗುವುದಕ್ಕಿಂತ ಹೆಚ್ಚಾಗಿ ಹಸಿಯಾಗಿ ತಿಂದಾಗ ಹೆಚ್ಚಿನ ಉಪಯೋಗವಾಗುತ್ತದೆ. ಆದರೆ ಕೆಲವೊಂದು ತರಕಾರಿಗಳನ್ನು ಹಸಿಯಾಗಿ ತಿಂದು ಗ್ಯಾಸ್ಟ್ರಿಕ್ ಬರಿಸಿಕೊಂಡಿರಾ ಹುಷಾರು.
ಮಲಬದ್ಧತೆ ಸಮಸ್ಯೆ ಇರುವವರಿಗೆ ಎಲ್ಲರು ಹೆಚ್ಚಾಗಿ ಸೂಚಿಸುವುದು ಮೂಲಂಗಿಯನ್ನು ಹಸಿಯಾಗಿ ತಿನ್ನಿ ಎಂದು. ಅದು ಸತ್ಯ ಕೂಡ. ಹಸಿಯಾಗಿ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಆದರೆ ಇದರ ಜೊತೆಗೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆಯೂ ಇದೆ.
ಎಲ್ಲಾ ತರಕಾರಿಗಳು ಎಲ್ಲರ ದೇಹಕ್ಕೂ ಆಗಿ ಬರುವುದಿಲ್ಲ. ಅದೇ ರೀತಿ ಮೂಲಂಗಿ ಕೂಡ. ಕೆಲವರಿಗೆ ಕಚ್ಚಾ ಮೂಲಂಗಿ ತಿನ್ನುವುದರಿಂದ ಹುಳಿ ಬೆಲ್ಟಿಂಗ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಾಣುತ್ತದೆ. ಕೆಲವರಿಗೆ ಹೊಟ್ಟೆ ನೋವು ಕೂಡ ಬರಬಹುದು.
ಸೀಸನ್ ಅಲ್ಲದೆ ಇರುವ ಸಮಯದಲ್ಲಿ ಮೂಲಂಗಿ ತಿನ್ನುವುದರಿಂದ ಅನಾರೋಗ್ಯವನ್ನು ಸ್ವಾಗತಿಸಿದಂತೆಯೇ ಸರಿ. ಖಾಲಿ ಮೂಲಂಗಿ ತಿನ್ನುವುದರಿಂದ ಆಮ್ಲೀಯತೆಯನ್ನು ಉಂಟು ಮಾಡುತ್ತದೆ. ಬರೀ ಮೂಲಂಗಿಯನ್ನು ಸೇವಿಸುವ ಬದಲು ಬೇರೆ ತರಕಾರಿಯ ಜೊತೆಗೂ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಮೂಲಂಗಿ ತಿನ್ನಬೇಡಿ. ರಾತ್ರಿ ವೇಳೆಯೂ ಸೇಫ್ ಅಲ್ಲ. ಮಧ್ಯಾಹ್ನದ ಸಮಯದಲ್ಲಿ ಆದಷ್ಟು ಬಳಸಿ.