Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿವೈ ವಿಜಯೇಂದ್ರ ವಯಸ್ಸೆಷ್ಟು.. ನನ್ನ ವಯಸ್ಸೆಷ್ಟು : ಸಚಿವ ವಿ ಸೋಮಣ್ಣ ಕೋಪ ಮಾಡಿಕೊಂಡಿದ್ದೇಕೆ..?

---Advertisement---

 

ನವದೆಹಲಿ: ಸಚಿವ ವಿ ಸೋಮಣ್ಣ ನಿನ್ನೆಯಷ್ಟೇ ನಾನು ಎಲ್ಲೂ ಹೋಗಲ್ಲ, ಬಿಜೆಪಿಯಲ್ಲಿಯೇ ಇರುತ್ತೀನಿ ಅಂತ ಕ್ಲಾರಿಟಿ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಇಂದು ನವದೆಹಲಿಗೂ ವಿಸಿಟ್ ಹಾಕಿದ್ದಾರೆ. ಈ ವೇಳೆ ಮಾತನಾಡುವಾಗ ಮಾಜಿ ಸಿಎಂ ಬಿಎಸ್ವೈ ಪುತ್ರ ಬಿವೈ ವಿಜಯೇಂದ್ರ ಬಗ್ಗೆ ಮಾತನಾಡಿದ್ದಾರೆ. ಬಿವೈ ವಿಜಯೇಂದ್ರ ವಯಸ್ಸೆಷ್ಟು ನನ್ನ ವಯಸ್ಸೆಷ್ಟು. ನಂಗೆ ಅವರಿಗೆ ಯಾಕೆ ಹೋಲಿಕೆ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಬಗ್ಗೆ ನನಗೆ ಸಿಟ್ಟಿಲ್ಲ. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಏನು ಅಭಿಪ್ರಾಯವಿದೆಯೋ ನನಗೆ ಗೊತ್ತಿಲ್ಲ. ನನ್ನ ಮಗ ಮತ್ತು ಯಡಿಯೂರಪ್ಪ ಅವರ ಮಗನ ನಡುವೆ ಏನು ಗೊಂದಲವಿದೆಯೋ ಅದನ್ನು ಅವರ ಬಳಿಯೇ ಕೇಳಿ. ನನ್ನಿಂದ ಬಿಜೆಪಿಗೆ ಯಾವ ಅಪಚಾರವೂ ಆಗಲ್ಲ ಎಂದಿದ್ದಾರೆ.

ಯಡಿಯೂರಪ್ಪ ಅವರು ನನ್ನನ್ನು ಕರೆದರೆ ಹೋಗುವೆ. ಆದ್ರೆ ಅವರು ಇವತ್ತಿನ ತನಕ ನನ್ನನ್ನು ಕರೆದಿಲ್ಲ. ನನ್ನದು ಮತ್ತು ಯಡಿಯೂರಪ್ಪ ಅವರದ್ದು ತಂದೆ ಮಗನ ಸಂಬಂಧ. ಯಡಿಯೂರಪ್ಪ ಅವರ ಬಗ್ಗೆ ದ್ವೇಷ ಮಾಡಿ ನನಗೇನು ಲಾಭ. ಅವರ ಬಗ್ಗೆ ವಿನಾಕಾರಣ ಮಾತನಾಡುವುದು ಅಪ್ರಸ್ತುತ. ನಾನು ಒಮ್ಮೊಮ್ಮೆ ಮಾತನಾಡುವ ಸತ್ಯವೇ ಕಹಿಯಾಗುತ್ತೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...