Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಿ ಮೋದಿಯವರು ಮಂಡ್ಯದಲ್ಲಿ‌ ಮಹಿಳೆಯೊಬ್ಬರ ಕಾಲಿಗೆ ಬಿದ್ದಿದ್ದೇಕೆ ಗೊತ್ತಾ..?

---Advertisement---

ಮಂಡ್ಯ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯ ಮತ್ತು ಧಾರವಾಡಕ್ಕೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳ ಮಂಡ್ಯದಲ್ಲಿ ಪ್ರಧಾನಿ ಮೋದಿ ಅವರು ಮಹಿಳೆಯೊಬ್ಬರ ಕಾಲಿಗೆ ಬಿದ್ದ ದೃಶ್ಯ ಕಂಡು ಬಂದಿದೆ. ಯಾಕೆ..? ಏನು ಎಂಬ ವಿಚಾರವನ್ನು ಆ ಮಹಿಳೆಯೇ ಹೇಳಿದ್ದಾರೆ.

ಹೀಗೆ ಪ್ರಧಾನಿ ಮೋದಿ ಅವರು ಕಾಲಿಗೆ ಬೀಳಲು ಹೋದ ಮಹಿಳೆಯ ಹೆಸರು ಅನುರಾಧ ಅಂತ. ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ. ಮೋದಿಯವರನ್ನು ಹತ್ತಿರದಿಂದ ಕಂಡಂತ ಅನುರಾಧ ಅವರಿಗೆ ಬಹಳ ಸಂತಸವಾಗಿ, ಅವರ ಕಾಲಿಗೆ ಬೀಳಲು ಹೋಗಿದ್ದಾರೆ. ಆದರೆ ಪ್ರಧಾನಿಯೇ ವಾಪಾಸ್ ಅವರ ಕಾಲಿಗೆ ಬಿದ್ದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅನುರಾಧ, ನರೇಂದ್ರ ಮೋದಿಜೀ ಅವರನ್ನು ನೋಡಿದ ಖುಷಿ. ಮತ್ತೊಂದು ಕಡೆ ದೇವರ ನನ್ನ ಎದುರು ನಿಂತಂತೆ ಫೀಲ್ ಆಗಿ ಅವರ ಕಾಲಿಗೆ ಬೀಳಲು ಹೋದೆ. ಆದ್ರೆ ಅವರೇ ನನ್ನ ಕಾಲಿಗೆ ಬಿದ್ದು ಬಿಟ್ಟರೂ. ನಂಗೆ ಏನು ಮಾಡಬೇಕೆಂದು ತಿಳಿಯದೆ ಕೆಳಗೆ ಕೂತುಬಿಟ್ಟೆ. ಅವರನ್ನು ನೋಡಬೇಕೆಂಬ ಕನಸು ನಮ್ಮ ಬಿಜೆಪಿ ನಾಯಕರಿಂದ ನನಸಾಗಿದೆ. ಮೋ್ಇಯವರಾಗಲಿ, ಅಮಿತ್ ಶಾ ಅವರಾಗಲಿ ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಿರ್ಮಲಾ ಸೀತರಾಮನ್, ಶೋಭಾ ಕರಂದ್ಲಾಜೆ ಇದ್ದಾರೆ. ನಮ್ಮ ಜಿಲ್ಲೆಯಲ್ಲಿ ನಾವೂ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಮೋದಿ ಅವರು, ಅಮಿತ್ ಶಾ ಅವರು ನಮಗೆ ಹುಮ್ಮಸ್ಸು ತುಂಬಿ ಹೋಗಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...