ಎಎಪಿಗೆ ಮತ ನೀಡಿ ಸ್ವಚ್ಚ ಆಡಳಿತಕ್ಕೆ ಅವಕಾಶ ನೀಡಿ : ಜಗದೀಶ್

1 Min Read

 

ಚಿತ್ರದುರ್ಗ,(ಫೆ.21) : ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಕಿತ್ತು ಹಾಕಿ ಎಎಪಿಗೆ ಮತವನ್ನು ಹಾಕುವುದರ ಮೂಲಕ ಭ್ರಷ್ಠಾಚಾರ ರಹಿತ ಆಡಳಿತವನ್ನು ನೀಡಲು ಅವಕಾಶವನ್ನು ನೀಡುವಂತೆ ಮತದಾರರಲ್ಲಿ ಎಎಪಿಯ ಜಂಟಿ ಕಾರ್ಯದರ್ಶಿಗಳಾದ ಜಗದೀಶ್ ಮನವ ಮಾಡಿದ್ದಾರೆ.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಸ್ವಚ್ಚತಾ ಕಾರ್ಯವನ್ನು ಪ್ರಾರಂಭ ಮಾಡಿ ಸಂತೇಪೇಟೆ ವೃತ್ತ, ಬಿಡಿರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಮಹಾವೀರ ವೃತ್ತ, ಓನಕೆ ಒಬವ್ವ ವೃತ್ತ, ನಿಜಲಿಂಗಪ್ಪ ರಸ್ತೆ, ವಿಪಿ ಬಡಾವಣೆಯ ಎಎಪಿ ಪಕ್ಷದ ಕಾರ್ಯಲಯದವರೆಗೂ ಸ್ವಚ್ಚತಾ ಕಾರ್ಯವನ್ನು ಮಾಡಿದರು.

ನಂತರ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಚಿತ್ರದುರ್ಗ ವಿಧಾನಸಬಾ ಕ್ಷೇತ್ರ ಯಾವುದೇ ರೀತಿಯಿಂದಲೂ ಅಭಿವೃದ್ದಿಯನ್ನು ಕಂಡಿಲ್ಲ, ಕಳೆದ ಹಲವಾರು ವರ್ಷಗಳಿಂದ ಶಾಸಕರಾಗಿರುವರು ಸಹಾ ಕ್ಷೇತ್ರದ ಅಭಿವೃದ್ದಿಯನ್ನು ಮಾಡದೇ ತಮ್ಮ ಅಭಿವೃದ್ದಿಯನ್ನು ಮಾಡಿಕೊಂಡಿದ್ದಾರೆ ಕಮಿಷನ್ ಪಡೆಯುವುದರ ಮೂಲಕ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಬಾರಿ ಎಎಪಿ ಪಕ್ಷಕ್ಕೆ ಅಧಿಕಾರವನ್ನು ನೀಡುವುದರ ಮೂಲಕ ಸ್ವಚ್ಚವಾದ ಆಡಳಿತವನ್ನು ನೀಡಲು ಅವಕಾಶವನ್ನು ನೀಡಬೇಕಿದೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸೂರು ಇಲ್ಲದೆ ಸಾವಿರಾರು ಮಂದಿ ಇದ್ದಾರೆ. ಅವರಿಗೆ ಸೂರನ್ನು ನೀಡುವುದರ ನಮ್ಮ ಕರ್ತವ್ಯವಾಗಿದೆ. ಜೆಸಿಬಿ ಪಕ್ಷಗಳಿಂದ ಯಾವುದೇ ರೀತಿಯಿಂದಲೂ ಅಭಿವೃದ್ದಿ ಸಾಧ್ಯವಿಲ್ಲ, ದೆಹಲಿಯಲ್ಲಿ ಕ್ರೇಜಿವಾಲ್‌ರವರು ಉತ್ತಮವಾದ ಆಡಳಿತವನ್ನು ನೀಡುತ್ತಿದ್ದಾರೆ.

ಇದೇ ರೀತಿಯ ಆಡಳಿತವನ್ನು ಕರ್ನಾಟಕದಲ್ಲೂ ಸಹಾ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಚಿತ್ರದುರ್ಗದಲ್ಲಿ ಪಕ್ಷದವತಿಯಿಂದ ಸದಸ್ಯತ್ವವನ್ನು ಮಾಡಲಾಗಿದ್ದು ಇದರಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಸದಸ್ಯರಾಗಿದ್ದಾರೆ, ಜಿಲ್ಲೆಯಲ್ಲಿ 20ಸಾವಿರಕ್ಕೂ ಹೆಚ್ಚು ಜನ ಸದಸ್ಯರಾಗಿದ್ದಾರೆ. ಎಂದ ಅವರು ಸರ್ಕಾರದಿಂದ ಬಂದ ಮನೆಗಳನ್ನು ಶಾಸಕರು ಅರ್ಹರಿಗೆ ನೀಡುವ ಬದಲು ತಮ್ಮ ಹಿಂಬಾಲಕರಿಗೆ ನೀಡಿದ್ದಾರೆ. ಇದರಿಂದ ಬಡವರು ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವನ್ನು ಮಾಡುವುದರ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷರಾದ ಫಾರೂಕು, ಹಿರಿಯೂರು ರಾಧಮ್ಮ, ತಿಪ್ಪೇಸ್ವಾಮಿ, ರವಿ,ಬಸವರಾಜು, ಲೋಹಿತ್, ನವೀನ್, ಆನಂದಪ್ಪ, ದಾಸಣ್ಣ, ತಿರುಕ, ಕುಬೇರ್ ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *