Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಮೇಶ್ ಜಾರಕಿಹೊಳಿ ಆಸೆ ಈಡೇರಿಸಲಿ : ಡಿಕೆ ಶಿವಕುಮಾರ್

---Advertisement---

ಬೆಂಗಳೂರು: ರಮೇಶದ ಜಾರಕಿಹೊಳಿ ಅವರ ಸಿಡಿ ವಿಚಾರ ಮತ್ತೆ ಮತ್ತೆ ಸದ್ದು ಮಾಡುತ್ತಿದೆ. ಈ ಸಿಡಿ ಮಾಡಿಸಿದರ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ. ನನ್ನ ಬಳಿ ಎಲ್ಲಾ ಸಾಕ್ಷಿಗಳು ಇದೆ. ಇದನ್ನು ಈಗ ಸಿಬಿಐ ತನಿಖೆಗೆ ವಹಿಸಬೇಕೆಂದು ರಮೇಶ್ ಜಾರಕಿಹೊಳಿ ಇತ್ತಿಚೆಗಷ್ಟೇ ಸುದ್ದಿಗೋಷ್ಟಿ ನಡೆಸಿ, ಹೌಹಾರಿದ್ದರು. ನೇರವಾಗಿ ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದ್ದರು. ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆಯೂ ಕೆಂಡಾಮಂಡಲರಾಗಿದ್ದರು.

ಇದಾದ ಬಳಿಕ ಡಿಕೆ ಶಿವಕುಮಾರ್ ಆಗಲಿ, ಲಕ್ಷ್ಮೀ ಹೆಬ್ಬಾಳ್ಕರ್ ಆಗಲಿ ಮಾತನಾಡಿರಲಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಏನೇ ಆಗಲಿ, ಏನೇ ಹೋಗಲಿ ಇನ್ನು ಮೂರು ತಿಂಗಳು ಕೆಟ್ಟದ್ದನ್ನು ಮಾತನಾಡಲ್ಲ, ಕೆಟ್ಟದ್ದನ್ನು ನೋಡಲ್ಲ, ಕೆಟ್ಟದ್ದನ್ನು ಕೇಳಲ್ಲ ಎಂವ ವಾಗ್ದಾನ ತೆಗೆದುಕೊಂಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಅವರು ಏನು ಬೇಡಿಕೆ ಕೇಳಿದ್ದಾರೆ ಅದನ್ನ ಈಡೇರಿಸಲಿ. ಕೇಂದ್ರ ಸರ್ಕಾರ ಅವರ ಮನವಿಯನ್ನು ಪುರಸ್ಕರಿಸಲಿ. ಸಿಡಿ ಕೇಸನ್ನು ಯಾವ ಸಂಸ್ಥೆ ಬೇಕಾದರೂ ತನಿಖೆ ಮಾಡಲಿ. ಆದ್ರೆ ಅವರು ಕೋರ್ಟ್ ಗೆ ಏನು ಅಫಿಡೆವಿಟ್ ಹಾಕಿದ್ದಾರೆ. ಕೋರ್ಟ್ ಏನು ನ್ಯಾಯ ನೀಡಿದೆ. ಕೋರ್ಟ್ ಗೆ ಏನಂತ ಅರ್ಜಿ ಹಾಕಿದ್ದರು. ಪಾಪ ಅವ್ರು ಮತ್ತು ಈಶ್ವರಪ್ಪ ಅವರು ಇಬ್ಬರು ಕೂಡ ಮಂತ್ರಿ ಸ್ಥಾನ ಕಳೆದುಕೊಂಡಿದ್ದೇವೆ ಅಂತ ಅಥಾಶರಾಗಿದ್ದಾರೆ. ನೀವೆಲ್ಲಾ ಗೃಹ ಸಚಿವರಿಗೆ ಹೇಳಿ ಅವರಿಗೆ ಸಹಾಯ ಮಾಡಿ” ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...