ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಮುಗಿಸಿ, ಧಾರಾವಾಡಕ್ಕೆ ತೆರಳಿದ್ದಾರೆ. ಸಂಜೆ ವೇಳೆ ಬೆಳಗಾವಿಯಲ್ಲಿ ಸೀಕ್ರೇಟ್ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸೀಕ್ರೇಟ್ ಸಭೆಯಲ್ಲು ರಾಜ್ಯದ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಆದರೆ ಇದೇ ಸಭೆಯಲ್ಲಿ ಅಮಿತ್ ಶಾ ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿ ಮತ್ತೆ ಸಿಡಿ ವಿಚಾರವನ್ನು ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಸಿಡಿ ಬಹಿರಂಗವಾದ ಕಾರಣ ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಸ್ ನಿಂದ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಚಿವ ಸ್ಥಾನ ವಾಪಾಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆ ಈಗ ಮತ್ತೆ ಸಿಡಿ ಕೇಸ್ ಪುನರ್ ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ.
“ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದೇ ಮಹಾನಾಯಕ. ಆ ಮಹಾನಾಯಕ ದೇವನಹಳ್ಳಿಯ ಸಮೀಪ ಮನೆಯೊಂದರಲ್ಲಿ ಸಿಡಿಗಳನ್ನು ತಯಾರಿಸಿದ್ದಾನೆ. ಅಲ್ಲಿ ರೇಡ್ ಮಾಡಿದಾಗ 90 ರಿಂದ 100 ಸಿಡಿಗಳು ಸಿಕ್ಕಿವೆ. ಆ ಮಹಾನಾಯಕ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ಖರ್ಚು ಮಾಡಿದ್ದು, 40 ಕೋಟಿ. ಹೀಗಾಗಿ ಅದರ ಸಾಜ್ಷಿ ನನ್ನ ಬಳಿ ಇದೆ. ಈ ಕೇಸನ್ನು ಸಿಬಿಐಗೆ ನೀಡಿ” ಎಂದು ಅಮಿತ್ ಶಾ ಅವರ ಬಳಿ ದೂರು ಸಲ್ಲಿಸಲಿದ್ದಾರಂತೆ.