ಬೆಂಗಳೂರು: ಕರ್ನಾಟಕದಲ್ಲಿ ಇನ್ನು ಚುನಾವಣೆಯ ದಿನಾಂಕ ಘೋಷಣೆಯಾಗಿಲ್ಲ. ಆದರೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಕೆಲಸ ಆರಂಭವಾಗಿದೆ. ಕಾಂಗ್ರೆಸ್ ನಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿಕ್ಕಾಪಟ್ಟೆ ದೊಡ್ಡದಿದೆ. ಇದೀಗ ಆರ್ ಆರ್ ನಗರದಿಂದ ಕುಸುಮಾ ಹನುಮಂತರಾಯಪ್ಪ ಅರ್ಜಿ ಹಾಕಿದ್ದಾರೆ.
ಕುಸುಮಾ ಅವರು ಆರ್ ಆರ್ ನಗರದ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಕೆಪಿಸಿಸಿಗೆ ಭೇಟಿ ನೀಡಿ ಇಂದು ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಕುಸುಮಾ ಅವರಿಗೆ ಆರ್ ಆರ್ ನಗರದಲ್ಲಿಯೇ ಟಿಕೆಟ್ ನೀಡಿದರೆ, ಮತ್ತೊಮ್ಮೆ ಜಿದ್ದಾಜಿದ್ದಿನ ಕಣವಾಗಿ ಆರ್ ಆರ್ ನಗರ ಬದಲಾಗಲಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಆರ್ ಆರ್ ನಗರಕ್ಕೆ ಕುಸಿಮಾ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಬಿಜೆಪಿಯಿಂದ ಮುನಿರತ್ನ ಅವರನ್ನು ಕಣಕ್ಕಿಳಿಸಲಾಗಿತ್ತು. ಆಗ ಟಫ್ ಕಾಂಪಿಟೇಷನ್ ನಡುವೆ ಗೆದ್ದು ಬಂದಿದ್ದು ಮಾತ್ರ ಮುನಿರತ್ನ ಅವರು. ಈ ಬಾರಿಯೂ ಅದೇ ರೀತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಕುಸುಮಾ ಹನುಮಂತರಾಯಪ್ಪ ಅವರು, ಅರ್ಜಿ ಸಲ್ಲಿಕೆಯ ಬಳಿಕ ಟ್ವೀಟ್ ಮಾಡಿದ್ದಾರೆ. ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಇಂದು ಕೆಪಿಸಿಸಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದೆ. ಕ್ಷೇತ್ರದ ಕೆಪಿಸಿಸಿ ಸದಸ್ಯರು, ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು ಎಂದಿದ್ದಾರೆ.