Apple iPhone 14 : ಕುಸಿದ ಬೇಡಿಕೆ, ನಿಲ್ಲಿಸಿದ ತಯಾರಿಕೆ…!

ಸುದ್ದಿಒನ್ ವೆಬ್ ಡೆಸ್ಕ್

ಪ್ರಸಿದ್ಧ ಮೊಬೈಲ್ ದೈತ್ಯ Apple ನ ನಿರೀಕ್ಷೆಗಳು ಹುಸಿಯಾಗಿವೆ. ಐಫೋನ್ 14 ಪ್ಲಸ್‌ನ ಬೇಡಿಕೆಯ ಕೊರತೆಯಿಂದಾಗಿ ಫೋನ್‌ಗಳ ಉತ್ಪಾದನೆಯನ್ನು ನಿಲ್ಲಿಸುವಂತೆ  ಆಪಲ್ ಈಗಾಗಲೇ ಉತ್ಪಾದನಾ ಕಂಪನಿಗಳಿಗೆ ತಿಳಿಸಿದೆ.

ಐಫೋನ್ 14 ಸರಣಿಯ ಪ್ಲಸ್ ಜೊತೆಗೆ, ಹೆಚ್ಚು ಮಾರಾಟವಾಗದ ಫೋನ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಸೆಪ್ಟೆಂಬರ್ 16 ರಂದು, ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆಪಲ್‌ನ ಪ್ರಧಾನ ಕಛೇರಿಯಲ್ಲಿ Apple iPhone 14 ಅನ್ನು ಬಿಡುಗಡೆ ಮಾಡಿತ್ತು.
ಐಫೋನ್ 14 ಪ್ಲಸ್ ಮೊಬೈಲ್ ಗಳ ಮಾರಾಟ ಕಳೆದ ತಿಂಗಳಿನಿಂದ ಪ್ರಾರಂಭವಾಗಿತ್ತು.6.7 ಇಂಚಿನ ಡಿಸ್ ಪ್ಲೇ ಹೊಂದಿರುವ ಈ ಫೋನಿನ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ.

ವಾಸ್ತವವಾಗಿ, ದೊಡ್ಡ ಡಿಸ್ಪ್ಲೇ ಹೊಂದಿರುವ ಫೋನ್‌ಗಳಿಗೆ ಹೆಚ್ಚು ಬೇಡಿಕೆ, ಕಡಿಮೆ ಬೆಲೆ ($ 899) ಮತ್ತು ರಜಾದಿನಗಳು ಬರುವುದರಿಂದ ಐಫೋನ್‌ 14 ಪ್ಲಸ್ ಅನ್ನು ಹೆಚ್ಚು ಜನರು ಖರೀದಿಸುತ್ತಾರೆಂದು ತಜ್ಞರು ಭಾವಿಸಿದ್ದರು. ಆದರೆ ಆಪಲ್ ಮತ್ತು ತಜ್ಞರ ನಿರೀಕ್ಷೆಗಳು ಹುಸಿಯಾಗಿವೆ. ಆದರೆ
ದೊಡ್ಡ ಡಿಸ್ಪ್ಲೇ ಹೊಂದಿರುವ ಈ ಫೋನ್ ಗಳನ್ನು ಖರೀದಿಸಲು ಗ್ರಾಹಕರು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಇದರ ಪರಿಣಾಮವಾಗಿ, ಆಪಲ್ ತನ್ನ ಐಫೋನ್ 14 ಪ್ಲಸ್ ಉತ್ಪಾದನೆಯನ್ನು ಕಡಿಮೆ ಮಾಡಿದೆ ಎಂದು ಅನೇಕ ವರದಿಗಳಿಂದ ಬೆಳಕಿಗೆ ಬಂದಿವೆ.

ಆಪಲ್ ಈ ವರ್ಷದ ಆರಂಭದಲ್ಲಿ 900 ಲಕ್ಷ ಯೂನಿಟ್ ಐಫೋನ್ 14 ಸರಣಿಯ ಫೋನ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿತ್ತು. ಆದರೆ ನಿರೀಕ್ಷೆಗಿಂತ 30 ಲಕ್ಷ ಫೋನ್‌ಗಳ ಉತ್ಪಾದನೆಯನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. Apple ಮತ್ತು ಅದರ ಐಫೋನ್‌ಗಳ ಪೂರೈಕೆದಾರರು ಈಗ 870 ಲಕ್ಷ ಯೂನಿಟ್‌ಗಳು ಅಥವಾ ಅದಕ್ಕಿಂತ ಕಡಿಮೆ ಮಾಡುವ ಉತ್ಪಾದನೆ ಮಾಡುವ ನಿರೀಕ್ಷೆಯಿದೆ.  iPhone 14 ಸೀರೀಸ್ ನ iPhone 14 ಮತ್ತು 14 Plus ಮಾದರಿಗಳ ಉತ್ಪಾದನೆಯು ಮಾರಾಟದ ಕೊರತೆಯಿಂದಾಗಿ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ.

ಬೇಡಿಕೆಯ ಕೊರತೆಯಿಂದಾಗಿ ಮಾರಾಟ ಕಡಿಮೆಯಾಗಿದೆಯಾದರೂ, ಆಪಲ್ ಈಗಾಗಲೇ ಈ ಇತ್ತೀಚಿನ ಆವೃತ್ತಿಯ ಫೋನ್‌ಗಳ ಉತ್ಪಾದನೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಈ ಹಿಂದೆ, iPhone 8 ಮತ್ತು iPhone 12 ಮಿನಿ ಮಾಡೆಲ್ ಫೋನ್‌ಗಳು ಗ್ರಾಹಕರಿಗೆ ಇಷ್ಟವಾಗದ ಕಾರಣ ಉತ್ಪಾದನೆಯನ್ನು ಕಡಿಮೆಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!