ಬೆಂಗಳೂರು : ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರ ಹಗರಣಗಳು ಯಾವಾಗ ನಡೆದರೂ ಕ್ರಮ ಕೈಗೊಳ್ಳುವಲ್ಲಿ ತಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂಡಿಯಾ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಎಲ್ಲಾ ಭ್ರಷ್ಟಾಚಾರ ಹಗರಣಗಳು ನಡೆದಾಗ ನಾವು ಅವುಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತೇವೆ.ಬದಲಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದರು.
#Exclusive | As far as corruption is concerned in a larger context, I have taken so many measures to contain it: @BSBommai, Karnataka CM #NewsToday #Karnataka | @sardesairajdeep @nagarjund pic.twitter.com/rzG2P7Dwwv
— IndiaToday (@IndiaToday) November 3, 2022
ಸಚಿವರು ಸಾರ್ವಜನಿಕ ಕಾಮಗಾರಿಗಳಿಗೆ ಶೇ.40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿರುವ ಗುತ್ತಿಗೆದಾರರ ಸಂಘದ ಭ್ರಷ್ಟಾಚಾರ ಆರೋಪಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ಕೇವಲ 800 ಗುತ್ತಿಗೆದಾರರು ಶೇ.40ರಷ್ಟು ಆರೋಪ ಮಾಡಲಾಗಿದೆ ಎಂದ ಬೊಮ್ಮಾಯಿ, ಒಟ್ಟು 44,000 ಗುತ್ತಿಗೆದಾರರಿದ್ದು, ಅವರಲ್ಲಿ ಕೆಲವರು ಮಾತ್ರ ಹೀಗೆ ಕೆಲವು ಒತ್ತಡಗಳಿಂದ ಹೇಳಿದ್ದಾರೆ ಎಂದರು.
ಮುಖ್ಯ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಮಿತಿಮೀರಿದ ಭ್ರಷ್ಟಾಚಾರ ಮತ್ತು ಅದಕ್ಷತೆಯಿಂದಲೇ ಸೋತಿದೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.