ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಬೇಕು ಎಂದು ಬಹಳ ವರ್ಷಗಳಿಂದಾನು ಒತ್ತಾಯ ಕೇಳಿ ಬರುತ್ತಿದೆ. ಆಗಾಗ ಎಚ್ಚರಿಕೆಯನ್ನು ಕೊಡುವ ಸಮುದಾಯ ಇದೀಗ ಮತ್ತೆ ಸ್ಟ್ರಾಂಗ್ ಆಗಿ ಎಚ್ಚರಿಕೆ ನೀಡಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ 25 ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದು, ಸರ್ಕಾರದಿಂದ ನಮಗೆ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ನೀಡಿದ ಭರವಸೆಗೆ ತಕ್ಕಂತೆ ಆದೇಶ ಹೊರಡಿಸಿಲ್ಲ. ಬಸವರಾಜ್ ಬೊಮ್ಮಾಯಿ ಅವರು ಮೂರು ತಿಂಗಳೊಳಗೆ ಭರವಸೆ ಈಡೇರಿಸುತ್ತೀವಿ ಎಂದಿದ್ದರು. ಆದರೆ ಆ ಭರವಸೆ ಈಗ ಸುಳ್ಳಾಗಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲೆಂದೆ ಈ ಸಮಾವೇಶ ನಡೆಸುತ್ತಿದ್ದೇವೆ. ಈ ಸಮಾವೇಶದಲ್ಲಿ ನಾವೂ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ.
ಜೊತೆಗೆ ಸಮಾವೇಶದ ಮೂಲಕವೇ ಮುಖ್ಯಮಂತ್ರಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇವೆ. ನಿಮಗೆ ನಮ್ಮ ಬೇಡಿಕೆಯನ್ನು ಈಡೇರಿಸುವ ಮನಸ್ಸು ಇದೆಯೋ.. ಇಲ್ಲವೋ..? ಆಗದಿದ್ದರೆ ಆಗುವುದಿಲ್ಲ ಅಂತ ಹೇಳಿ. ನಿಮ್ಮ ರಾಜಕೀಯ ಭವಿಷ್ಯಕ್ಕೆ ನಾವೇನು ತೊಂದರೆ ಮಾಡುವುದಿಲ್ಲ. ನಾವೂ ನಮ್ಮ ಹೋರಾಟವನ್ನಷ್ಟೇ ಮುಂದುವರೆಸುತ್ತೇವೆ. ನಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದೆ ಇದ್ದರೆ 25 ಲಕ್ಷ ಜನರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.