ನವದೆಹಲಿ: ಪ್ರಧಾನಿ ಮೋದಿ ಇಂದು ಉತ್ತರಾಖಂಡ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಕೇದಾರನಾಥ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಿಸಿ, ನಮಸ್ಕರಿಸಿದ್ದಾರೆ. ಉತ್ತರಾಖಂಡ ರಾಜ್ಯದಲ್ಲಿ ಸುಮಾರು 3,400 ಕೋಟಿ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ.
VIDEO: PM Shri @narendramodi ji lays foundation stone of the Kedarnath Ropeway Project at Kedarnath Temple, #Uttarakhand#ModiInDevBhumi pic.twitter.com/IvC4E0aktJ
— Durgesh Thakur (@CGDurgeshThakur) October 21, 2022
ಬಳಿಕ ಶಂಕರಾಚಾರ್ಯ ಅವರ ಸಮಾಧಿಗೆ ತೆರಳಿದ ಪ್ರಧಾನಿ ಮೋದಿ ಅವರು ಅಲ್ಲಿ ಮಂದಾಕಿನಿ ಅಷ್ಟಪದ ಹಾಗೂ ಸರಸ್ವತಿ ಅಷ್ಟಪದ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಬದರೀನಾಥಕ್ಕೆ ತೆರಳಿ ಅಲ್ಲಿಯೂ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇನ್ನು ಬಹಳ ಮುಖ್ಯವಾಗಿ ಗೌರಿಕುಂಡ್ ನಿಂದ ಕೇದಾರನಾಥ ಮಾರ್ಗದ ರೋಪ್ ವೇಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಏಳು ಗಂಟೆಯ ಜರ್ನಿಯನ್ನು 30 ನಿಮಿಷಕ್ಕೆ ಇಳಿಸಲಾಗಿದೆ. ರೋಪ್ ವೇ ಇಲ್ಲದೆ ಹೋಗಿದ್ದರೆ ಗೌರಿಕುಂಡ್ ನಿಂದ ಕೇದಾರನಾಥಕ್ಕೆ ಸಂಚರಿಸಲು ಆರೇಳು ಗಂಟೆಯೇ ಬೇಕಾಗಿತ್ತು. ಹೀಗೆ ಪವಿತ್ರ ಕ್ಷೇತ್ರಗಳಲ್ಲಿ ಹಲವು ಜಾಗದಲ್ಲಿ ರೋಪ್ ವೇ ನಿರ್ಮಾಣವಾಗಲಿದೆ. ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.