ಬೆಂಗಳೂರು: ಮಳೆ ಬಂದ್ರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಹೋಗದ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಮಳೆ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರು ಹೋಗೋದು ಅವರ ಕರ್ತವ್ಯ. ಎಲ್ಲರು ಕೂಡ ಹೋಗ್ತಿದ್ದಾರೆ, ಮತ್ತೆ ಹೋಗಬೇಕು. ಜನರ ಪರಿಸ್ಥಿತಿ ಯಲ್ಲಿ ನಾವು ಹೋಗಿಲ್ಲ ಅಂದರೆ ಸಮಸ್ಯೆ ಆಗುತ್ತದೆ.
ನಾನು ಕೂಡ ನಿನ್ನೆ ನನ್ನ ಕ್ಷೇತ್ರದ ಆಗುಂಬೆ ಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಭೂಕುಸಿತ ದಿಂದ ಉಡುಪಿ, ಶಿವಮೊಗ್ಗ ಹೆದ್ದಾರಿ ಕಟ್ ಆಗಿದೆ. ಆ ಹೆದ್ದಾರಿ ಮರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ಅನಾಹುತ ಗಳು ಹಲವು ಕಡೆಗಳಲ್ಲಿ ಆಗಿವೆ. ಚಿಕ್ಕಮಗಳೂರಲ್ಲಿ ಸದ್ಯ ಬೇರೆ ಉಸ್ತುವಾರಿ ಸಚಿವರು ಇಲ್ಲ. ಆಯಾ ಆಯಾ ಕ್ಷೇತ್ರದ ಶಾಸಕರೇ ಹೋಗ್ತಿದ್ದಾರೆ. ಕೊಡಗಿನ ಇಬ್ಬರು ಶಾಸಕರು ಜನರ ಜೊತೆ ಇದ್ದಾರೆ.
ಉಸ್ತುವಾರಿ ಸಚಿವರು ಸ್ವಲ್ಪ ಪಠ್ಯ ಪುಸ್ತಕ ವಿತರಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತು ನಾಳೆ ಅವರು ಕೊಡಗಿಗೆ ಹೋಗ್ರಾರೆ. ಶಾಸಕರು ಉಸ್ತುವಾರಿ ಸಚಿವರ ಜೊತೆ ಸಂಪರ್ಕದಲ್ಲಿದ್ದಾರೆ. ಬೊಮ್ಮಾಯಿ ಸರ್ಕಾರ ಕೂಡ ಸಾಕಷ್ಟು ಹಣಕಾಸನ್ನು ಒದಗಿಸಿದೆ. ಎಲ್ಲ ತಹಶಿಲ್ದಾರರ ಬಳಿ ಇಟ್ಟಿದ್ದಾರೆ. ತಹಶಿಲ್ದಾರರು ಮನೆ ಕಳೆದುಕೊಂಡ ವರಿಗೆ ಪರಿಹಾರ ಕೊಡ್ತಿದ್ದಾರೆ. ಯುದ್ದೋಪಾದಿಯಲ್ಲಿ ಸರ್ಕಾರ ಅಧಿಕಾರಿಗಳು, ಸಚಿವರು ಶಾಸಕರು ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರು ಇರಬಹುದು, ಬಿಜೆಪಿ ಶಾಸಕರು ಇರಬಹುದು ಅದನ್ನು ಮಾಡ್ತಿದ್ದಾರೆ ಎಂದಿದ್ದಾರೆ.
ಚಾಮರಾಜಪೇಟೆ ಬಂದ್ ಗೆ ಕರೆ ವಿಚಾರವಾಗಿ ಮಾತನಾಡಿದ್ದು, ಚಾಮರಾಜಪೇಟೆ ಬಂದ್ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಕಾನೂನು ಸುವ್ಯವಸ್ಥೆ ಹದಗೆಡದ ರೀತಿ ಕ್ರಮ ವಹಿಸಲಾಗಿದೆ. ಕಮಿಷನರ್ ನೇತೃತ್ವದ ತಂಡ ಅದನ್ನು ನಿಭಾಯಿಸುತ್ತಾರೆ.
ಮಾಜಿ ಸಿಎಂ ಗಳಿಗೆ ಬೆದರಿಕೆ ಪತ್ರ ವಿಚಾರವಾಗಿ ಮಾತನಾಡಿ, ಪತ್ರದ ಬಗ್ಗೆ ಬೇಕಿದ್ರೆ ಅವರು ದೂರು ಕೊಡಲಿ. ನಾವು ಅವರಿಗೆ ರಕ್ಷಣೆ ಕೊಡಲು ಸಿದ್ದರಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.