ಕಾನ್ಸ್‌ಟೇಬಲ್ ಇಂದ ಎಡಿಜಿಪಿವರೆಗೂ ಬಂಧನ ಆಗಿದೆ : ಕಾಂಗ್ರೆಸ್ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ

ಬೆಂಗಳೂರು: ಪಿಎಸ್‌ಐ ಹಗರಣದ ಬಗ್ಗೆ ಬೆಳಗ್ಗೆ ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ ಗಮನಿಸಿದೆ. ಅವರು ಏನನ್ನು ಬಯಸ್ತಿದ್ದಾರೆ ಗೊತ್ತಿಲ್ಲ. ಇಷ್ಟೊಂದು ಪಾರದರ್ಶಕವಾಗಿ ಫ್ರೀಹ್ಯಾಂಡ್ ಕೊಟ್ಟು ತನಿಖೆ ನಡೆಸಿದೆವು. ಕಾನ್ಸ್‌ಟೇಬಲ್ ಇಂದ ಎಡಿಜಿಪಿವರೆಗೂ ಬಂಧನ ಆಗಿದೆ. 25ಕ್ಕಿಂತ ಹೆಚ್ಚು ಪೊಲೀಸರು ಅರೆಸ್ಟ್ ಆಗಿದ್ದಾರೆ. ಯಾವುದನ್ನೂ ಮುಚ್ಚಿಟ್ಟಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಅವರಿಗೆ ಅದನ್ನ ಸಹಿಸಲು ಸಾಧ್ಯವಾಗಲಿಲ್ಲವಾ. ಹಿಂದೆ ಅವರು ರೀಡು ಕೇಸ್ ಬಗ್ಗೆ ನ್ಯಾಯಾಧೀಶರಿಗೆ ನೀಡಿದ್ರು. ಕೆಂಪಣ್ಣ ಬಗ್ಗೆ ಅದು ಏನಾಯ್ತು.?. ಹೀಗೆ ಪದೇ ಪದೇ ಜುಡಿಶಿಯಲ್ ನೀಡೋ ಕಾರಣ ಏನು. ಪ್ರಕರಣ ತನಿಖೆ ಮುಂದೆ ಹೋಗಬಾರದು ಅಂತಲಾ.? ಪದೇ ಪದೇ ನನ್ನ ರಾಜೀನಾಮೆ ಕೇಳೋದು, ಸಿಎಂ ರಾಜೀನಾಮೆ ಕೇಳ್ತಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

 

ನಾವು ಎನ್ಕ್ವೈರಿ ಮಾಡಲು ಸಿದ್ದ ದಾಖಲೆ ಕೊಡಿ ಅಂತ ಹೇಳಿದ್ದೇನೆ. ಯಾರೂ ದಾಖಲೆ ಕೊಡುತ್ತಿಲ್ಲ. CID ಇಂದ ಖರ್ಗೆ ಅವರಿಗೆ ಪತ್ರ ಬರೆದು ದಾಖಲೆ ಕೇಳಿದ್ರು. ಖರ್ಗೆ ಬೆನ್ನು ತೋರಿಸಿದ್ರೆ ವಿನಾ ಸಾಕ್ಷಿ ಕೊಡಲಿಲ್ಲ. ನಮ್ಮ ಎನ್‌ಕ್ವೈರಿ ಸಂಸ್ಥೆ ಜೊತೆ ಸಹಕಾರ ನೀಡಲಿಲ್ಲ. ಇವರ ಕಾಲದಲ್ಲಿ ಹಗರಣ ಆಗಿದ್ದ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ. ನಮ್ಮ ಕಾಲದಲ್ಲಿ ಮುಚ್ಚಿ ಹಾಕುವ ಕೆಲಸ ಆಗಿಲ್ಲ. ಇಂದು ನನಗೆ ಸಮಾಧಾನ ಆಗಿದೆ. ಸಿಐಡಿ ವಿಶೇಷ ಕೆಲಸ ಮಾಡಿದೆ, ಇನ್ನೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *