ಬೆಂಗಳೂರು: ಇಂದು ಜೆಡಿಎಸ್ ಪಕ್ಷದಿಂದ ಜನತಾ ಕಾರ್ಯಕ್ರಮ ನಡೆಯುತ್ತಿದ್ದು, ಕುಮಾರಸ್ವಾಮಿ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಬಿಲೇಕಹಳ್ಳಿ ಕೆರೆ ಕಥೆ ಏನಾಯ್ತು. ಕೆರೆ ನುಂಗಾಕಿ ಉಳ್ಳವರಿಗೆ ಸೈಟ್ ಕೊಟ್ರು. ಕಾನೂನು ಬಾಹಿರವಾಗಿ ಬಡಾವಣೆ ರಚನೆ ಮಾಡಿದ್ರು ಬಿಡಿಎದವರು. ಹೊಸಕೆರೆ ಹಳ್ಳಿ, ಬಾಣಾವಾರ ಕೆರೆ ಕಥೆ ಏನಾಯ್ತು. 12 ಕೆರೆಗೆ 123 ಕೋಟಿ ಕೊಟ್ಟೊದ್ದೆ ದಾಸರಹಳ್ಳಿಗೆ. ಆದರೆ ನಂತರ ಬಂದ ಸರ್ಕಾರ ಏನು ಮಾಡಿತು.
ಇಡೀ ಬೆಂಗಳೂರು ನಗರದ ಜನ ನನಗೆ ಮತ ಹಾಕ್ತಾರೋ ಇಲ್ಲೋ ಕೇಳಿ. ರಾಜಕಾಲುವೆಗಾಗಿ ಕೋಟಿ ಕೋಟಿ ಹಣ ಸುರೀತಾ ಇದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರು ನಗರದ ಜನರ ದಾರಿ ತಪ್ಪಿಸ್ತಾ ಇದಾರೆ. ಎರಡು ಪಕ್ಷಗಳು ಈ ಜನರಿಗೆ ಕೊಟ್ಟ ಕೊಡುಗೆ ಏನು. ಅಭಿವೃದ್ಧಿ ಹೆಸರಲ್ಲಿ ಮಂತ್ರಿ ಆದ್ರಲಾ. ಈಗ ಯಾಕೆ ಬೋಟ್ ನಲ್ಲಿ ನೀರು ಹೊಡಿತಾ ಇದಿರಾ..?. ಅದಕ್ಕಾಗಿ ಜನ ಮತ ಹಾಕಬೇಕು, ಅದಕ್ಕಾಹಿ ನೀವು ಕೆಲಸ ಮಾಡಬೇಕು.
ನೀವು ಎಲ್ಲರ ಮನೆಗೆ ತಲುಪಬೇಕಾಗಿದೆ. ಕರ ಪತ್ರ ಹಂಚಿಕೆ ಮಾಡಿ. ಬಡ ಕುಟುಂಬದ ಬದುಕು ಮಾಡೋವ್ರಿಗೆ ನಮ್ಮ ಪಕ್ಷ ಇರುತ್ತದೆ ಎಂದು ಹೇಳಿ. ಜನರ ಬಳಿ ಒಂದು ಅವಕಾಶ ಕೊಡಿ ಅಂತಾ ಕೇಳಿ. ನಮಗೇನೂ ಇಪ್ಪತ್ತೈದು ವರ್ಷಗಳ ಕಾಲಾವಕಾಶ ಬೇಡ. ಕೇವಲ ಐದು ವರ್ಷಗಳ ಅವಕಾಶ ಸಾಕು.
ಕೆರೆ, ಕಾಲುವೆ, ಚರಂಡಿ, ವಿದ್ಯುತ್ ರಸ್ತೆ, ಇವುಗಳಲ್ಲಿ ಜನರ ಆದ್ಯತೆ ಏನು ಅಂತಾ ಕೇಳಿ. ಪ್ರತಿ ಮನೆಯಿಂದ ಮಾಹಿತಿ ತನ್ನಿ ಎಂದು ಜನತಾ ಮಿತ್ರ ಕಾರ್ಯಕ್ರಮ ದಲ್ಲಿ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ. ಹದಿನೇಳನೇ ತಾರೀಖು ಬೆಂಗಳೂರಿನ ಒಂದು ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡೋಣ ಎಂದು ಹೇಳಿದ್ದಾರೆ.