ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಪೊಲೀಸ್ ದಬ್ಬಾಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ ಸುರೇಶ್, ನಮ್ಮಪಕ್ಷದ ಕಚೇರಿಗೂ ನಿಷೇಧ ಹೇರಿದ್ದರು. ನಮ್ಮ ಕಚೇರಿಗೆ ಹೋಗೋಕೆ ಅಂತಾ ಪ್ರಯತ್ನ ಮಾಡಿದ್ವಿ. ಆ ವೇಳೆ ಕಚೇರಿಗೆ ಹೋಗುವುದಕ್ಕೆ ಬಿಡಲಿಲ್ಲ. ವಾಪಸ್ ಬರುವುದಕ್ಕೂ ಬಿಡಲಿಲ್ಲ. ನಮ್ಮನಾಯಕರಿಗೆ ಧೈರ್ಯ ತುಂಬಲು ಹೋಗಿದ್ವಿ. ಆದರೆ ಇವರು ಮಾಡ್ತಿರೋದು ಪ್ರಜಾಪ್ರಭುತ್ವದ ವಿರೋಧಿ ಎಂದಿದ್ದಾರೆ.
ಇನ್ನು ಅಗ್ನಿಪಥ್ ಹೋರಾಟದ ಕಿಚ್ಚು ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಆತುರವಾಗಿ ಅಗ್ನಿಪಥ್ ಜಾರಿ ಮಾಡ್ತಿದ್ದಾರೆ. ಚರ್ಚೆ ಮಾಡದೇ ಯಾವುದೇ ನಿಯಮ ಇಲ್ಲದೇ ಆತುರವಾಗಿ ಯೋಜನೆ ಜಾರಿ ಮಾಡ್ತಿದ್ದಾರೆ. ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದಾರೆ. ಯಾವ ಕಾರಣಕ್ಕಾಗಿ 17 ವರ್ಷದ ವಯೋಮಾನ ನಿಗದಿ ಮಾಡಿದ್ದಾರೆ?. ಈ ಕಾರಣವನ್ನ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಕೊರೋನಾ ಇದ್ದ ಎರಡು ವರ್ಷದಲ್ಲಿ ಉದ್ಯೋಗ ನೇಮಕಾತಿ ಆಗಿಲ್ಲ. ೪ ವರ್ಷದ ನಂತರ ಸೇನೆಯಿಂದ ಹೊರಕಳಿಸೋಕೆ ಮುಂದಾಗಿದ್ದಾರೆ. ಸ್ಕಿಲ್ ಡೆವಲಪ್ಮೆಂಟ್ ಅವಕಾಶ ಸಿಗಲಿದೆ ಅಂತಿದ್ದಾರೆ
ಕಳೆದ ವರ್ಷಗಳಿಂದ ಪ್ರಧಾನಿಯವರ ಸುಳ್ಳುಗಳನ್ನ ಕೇಳಿ ಸಾಕಾಗಿದೆ. ಯುವಕರಿಗೆ ಪೂರ್ಣಪ್ರಮಾಣದ ಉದ್ಯೋಗ ಭದ್ರತೆ ಒದಗಿಸಬೇಕು. ಕೇಂದ್ರ ಸರ್ಕಾರಕ್ಕೆ ಸಂಸದ ಡಿಕೆ ಸುರೇಶ್ ಆಗ್ರಹಿಸಿದ್ದಾರೆ.