ಇದೇ 12ರಿಂದ 19ರವರೆಗೆ ಏಷ್ಯಾ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ನಡೆಯಲಿದೆ. ಕತಾರ್ನ ದೋಹಾದಲ್ಲಿ ನಡೆಯಲಿರುವ ಈ ಚಾಂಪಿಯನ್ ಶಿಪ್ ಗೆ ಫಿಬಾ 16 ವರ್ಷದೊಳಗಿನವರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆ ತಂಡದಲ್ಲಿ ಕರ್ನಾಟಕದ ಕುಶಾಲ್ ಗೌಡ ಹೆಸರಿದ್ದು, ಕರ್ನಾಟಕದ ಮಂದಿ ಖುಷಿಯಾಗಿದ್ದಾರೆ.
ಜೂನ್ 12ರಂದು ಆಸ್ಟ್ರೇಲಿಯಾ, 13ರಂದು ಬಹರೇನ್ ಮತ್ತು 14ರಂದು ಕತಾರ್ ವಿರುದ್ಧ ಭಾರತ ಪಂದ್ಯಗಳನ್ನು ಆಡಲಿದೆ. ತಂಡದ ನಾಯಕತ್ವವನ್ನು ಲೋಕೆಂದ್ರ ಸಿಂಗ್ ವಹಿಸಿಕೊಂಡಿದ್ದು, ಕುಶಾಲ್ ಗೌಡ, ಎಸ್.ಕೆ. ಫಯಾಜ್, ಜನಮೇಜಯ ಸಿಂಗ್, ಜಿ. ಅಭಿಮನ್ಯು, ಜೈದೀಪ್ ರಾಥೋಡ್, ಮೊಹಮ್ಮದ್ ಇಶಾನ್, ಲವೀಶ್, ಹರ್ಷ ದಾಗರ್, ಕುಶಾಲ್ ಸಿಂಗ್, ಸಾಹಿಬ್ಜೀತ್ ಸಿಂಗ್, ಸಂಜು ಗಜಬೀಯೆ ತಂಡದಲ್ಲಿದ್ದಾರೆ.