ಕುಟುಂಬದವರ ಸಂಭ್ರಮಾಚರಣೆ, ಮಾಧ್ಯಮಗಳ ಸುದ್ದಿ ಪ್ರಸಾರ, ಎಲ್ಲಿಲ್ಲದ ಸಂಭ್ರಮ : ಆ ಹುಡುಗಿಯ ಲೈಪ್ ನಲ್ಲಿ ಸುಳ್ಳಾಯ್ತು UPSC ಪರೀಕ್ಷೆ..!

ರಾಮಗಢ: ಇತ್ತೀಚೆಗೆ ಯುಪಿಎಸ್ಸಿ ಫಲಿತಾಂಶ ಹೊರಬಿದ್ದಿದೆ. ಇದರಲ್ಲಿ ರ್ಯಾಂಕ್  ಪಡೆದವರೆಲ್ಲಾ ಸಂಭ್ರಮಿಸಿದ್ದಾರೆ. ಅವರ ಸುದ್ದಿ ಮಾಧ್ಯಮದಲ್ಲೂ ಪ್ರಸಾರವಾಗಿದೆ. ಇದೆ ರೀತಿ ದಿವ್ಯಾ ಪಾಂಡೆ ಎಂಬ ವಿದ್ಯಾರ್ಥಿನಿಯೂ ರ್ಯಾಂಕ್ ಬಂದಿದ್ದಾಳೆಂಬ ಸುದ್ದಿ ಹರಿದಾಡಿತ್ತು. ಮನೆಯವರು ಸಂಭ್ರಮಿಸಿದ್ದರು. ಸ್ಥಳೀಯರು ಸನ್ಮಾನಿಸಿದ್ದರು. ಆದರೆ ಹೆಸರಿನ ಗೊಂದಲವಾಗಿ ಆ ಸಂಭ್ರಮವೆಲ್ಲಾ ಸುಳ್ಳಾಗಿದೆ. ಈ ಬಗ್ಗೆ ಆಕೆಯ ಕುಟುಂಬಸ್ಥರೇ ಸ್ಪಷ್ಟನೆ ನೀಡಿದ್ದಾರೆ.

ದಿವ್ಯಾ ಪಾಂಡೆ ಮನೆಯವರ ಸಂಭ್ರಮಕ್ಕೆ ಜಾರ್ಖಂಡ್​ ಜಿಲ್ಲಾಡಳಿತ ಮತ್ತು ಸೆಂಟ್ರಲ್​ ಕೋಲ್​ಫೀಲ್ಡ್ಸ್​ ನಿಗಮ (ಸಿಸಿಎಲ್) ಕೂಡ ಸನ್ಮಾನ ಮಾಡಿತ್ತು. ದಕ್ಷಿಣ ಭಾರತ ಮೂಲದ ದಿವ್ಯಾ.ಪಿ ಯುಪಿಎಸ್ಸಿ ನಲ್ಲಿ ರ್ಯಾಂಕ್ ಬಂದಿರುವುದು. ಆದರೆ, ಫ್ರೆಂಡ್ಸ್​ ಮಾಡಿದ ಮಿಸ್ಟೇಕ್​ನಿಂದ ದಿವ್ಯಾ ಪಾಂಡೆ ಕುಟುಂಬಸ್ಥರು ಸಂಭ್ರಮ ಪಟ್ಟಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಟುಂಬಸ್ಥರು, ಯುಪಿಎಸ್​ಸಿ ಪರೀಕ್ಷೆಯಲ್ಲಿ 323ನೇ ರ್ಯಾಂಕ್​ನಲ್ಲಿ ಪಾಸ್​ ಆಗಿರುವ ಬಗ್ಗೆ ನನ್ನ ಅಕ್ಕನಿಗೆ ಉತ್ತರ ಪ್ರದೇಶ ಮೂಲದ ಫ್ರೆಂಡ್ಸ್​ ಫೋನ್​ ಮೂಲಕ ತಿಳಿಸಿದರು. ನಾವು ಯುಪಿಎಸ್​ಸಿ ಫಲಿತಾಂಶ ನೋಡಲು ವೆಬ್​ಸೈಟ್​ ಪರಿಶೀಲಿಸಿದೆವು. ಆದರೆ, ಇಂಟರ್ನೆಟ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಇಷ್ಟೆಲ್ಲ ರಾದ್ಧಾಂತವಾಯಿತು. ನಮ್ಮಿಂದ ಎಡವಟ್ಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *