ಬೆಂಗಳೂರು: ಪಿಎಸ್ಐ ಹಗರಣದ ತನಿಖೆ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇವತ್ತಿನ ತನಕ ಒಬ್ಬ ಆಫೀಸರ್ ನ ಕರೆದು ತನಿಖೆ ನಡೆಸಿಲ್ಲ. ಎಕ್ಸಾಂ ಅಥಾರಿಟಿ ಇತ್ತು, ಹಿರಿಯ ಅಧಿಕಾರಿಗಳಿಗೆ ನೋಟೀಸ್ ಕೊಟ್ಟಿಲ್ಲ ಆ ಬಗ್ಗೆ ಇಲ್ಲಿವರೆಗೆ ಮಾತನಾಡುತ್ತಿಲ್ಲ. ಮೊದಲು ನಾವೂ ರಾಜ್ಯದ ಜೈಲರ್ ವಿಚಾರದಲ್ಲಿ ಯಾರು ಹೊರಗಡೆ ಇದ್ದಾರೆ, ಒಳಗಡೆ ಸೇರಿದ್ದಾರೆ ಅವರು ಜೈಲಿನ ಪರೀಕ್ಷೆಯಲ್ಲಿ ನಾನು ಭಾಗಿಯಾಗಿದ್ದೆ ಎಂಬ ಸ್ಟೇಟ್ ಮೆಂಟ್ ಕೊಟ್ಟರು, ಅದನ್ನು ಸೈಡಿಗಿಟ್ಟು ಬರೀ ಪಿಎಸ್ಐ ವಿಚಾರಕ್ಕೆ ಹೋಗುತ್ತಿದ್ದಾರೆ. ನಮಗೇನು ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ.
ಕುಮಾರಸ್ವಾಮಿ ಅವರು ಏನು ಹೇಳಿದ್ರು, ಇದು ದೊಡ್ಡ ಡೀಲ್ ಅಂತ. ಬಹುಶಃ ನಾನು ನಮ್ಮ ತನಿಖೆ ನೋಡಿದಾಗ ಅವರ ಹೇಳಿಕೆಯಲ್ಲೂ ಬಹಳ ಸತ್ಯ ಕಾಣುತ್ತಿದೆ. ಅವರು ನೀಡಿದ ಹೇಳಿಕೆ ಮೇಲೆ ಸರ್ಕಾರ ಮೊದಲು ಚಿಂತನೆ ಮಾಡಬೇಕು. ಈ ಸಂಬಂಧ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
ನಮ್ಮ ಅಜೆಂಡಾನೆ 40% ಪ್ಲಸ್ ಉದ್ಯೋಗದ ಹಗರಣ ನಡೆಯುತ್ತದೆಯಲ್ಲ ಅದನ್ನು ಸರಿ ಮಾಡುವುದು. ಬರಿ ಪಿಎಸ್ಐ ಒಂದೇ ಅಲ್ಲ. ಪಿಎಸ್ಐ ನೇಮಕಾತಿ ವಿಚಾರದಲ್ಲಿ ಬರೀ ಹುಡುಗರನ್ನಹ ತರ್ತಾ ಇದ್ದಾರೆ. ಹುಡುಗರಲ್ಲ ರೀ. ಹುಡುಗರು ಅಂಗಡು ತೆಗೆದಿದ್ದಕ್ಕೆ ಸಿಗುತ್ತೆ ಅಂತ ಹೋಗಿ ಖರೀದಿ ಮಾಡೋದಕ್ಕೆ ಹೋಗಿದ್ದರು ಅಷ್ಟೆ. ಯಾರು ಆ ಅಂಗಡಿ ನಡೆಸಿದರು, ಅದಕ್ಕೆ ಬೆನ್ನೆಲುಬು ಯಾರು ಎಂಬ ನಂಬರ್ ಗಳು ನಮ್ಮ ಬಳಿ ಬಂದಿದೆ. ಏನು ತನಿಖೆ ಮಾಡುತ್ತಾರೆ ಎಂಬುದನ್ನು ನೋಡುತ್ತಾ ಇದ್ದೇವೆ. ತನಿಖೆ ನಡೆಯಲಿ ಎಂದಿದ್ದಾರೆ.