ಬೆಂಗಳೂರು: ಮೈತ್ರಿ ಸರ್ಕಾರದಲ್ಲಿದ್ದಾಗ ಆದ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ನಾನು ಎರೆಉ ಬಾರಿ ಮುಖ್ಯಮಂತ್ರಿಯಾಗಿದ್ದು, ಒಂದು ಬಾರಿ ಬಿಜೆಪಿ ಜೊತೆ, ಮತ್ತೊಂದು ಬಾರಿ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದು ಎರಡು ಬಾರಿಯೂ ನಾನು ಸ್ವತಂತ್ರವಾದ ಸರ್ಕಾರ ಮಾಡಲಿಲ್ಲ. ಮೊದಲನೇ ಬಾರಿ ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಅಪ್ಪರ್ ಭದ್ರ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟವನು ನಾನಿ. 30 ವರ್ಷದಿಂದ ನೆನೆಗುದಿಗೆ ಬಿದ್ದಂತ, ನಿಜ ಲಿಂಗಪ್ಪ ಅವರ ಕಾಲದಿಂದ ಚಿತ್ರದುರ್ಗದ ಜನತೆ ಏನು ಹೋರಾಟ ಮಾಡುತ್ತಿದ್ದರು ಅದಕ್ಕೆ ಒಂದು ತೀರ್ಮಾನ ಮಾಡಿದವನು ನಾನು.
ಕಳಸಾ ಬಂಡೂರಿ ಯೋಜನೆಗೆ ಸಚಿವ ಸಂಪುಟದಲ್ಲಿಒಪ್ಪಿಗೆ ಕೊಟ್ಟವನು ನಾನು. ಆ ಕಾರ್ಯಕ್ರಮ ಆಗಬೇಕು ಅಂತ ಪ್ರಥಮವಾಗಿ ಹಣ ರಿಲೀಸ್ ಮಾಡಿದವನು ನಾನು. ಅವತ್ತು ಕೂಡ ನಮ್ಮ ಪಕ್ಷದವರು ನೀರಾವರಿ ಸಚಿವರಿರಲಿಲ್ಲ. ಅವತ್ತು ಬಿಜೆಪಿಯವರು ನೀರಾವರಿ ಸಚಿವರಾಗಿದ್ದರು. ಕಳಸಾ ಬಂಡೂರಿಯ ಕೆಲವು ಟೆಕ್ನಿಕಲ್ ಸಮಸ್ಯೆಯನ್ನು ಸಂಪುಟದಲ್ಲಿ ಎತ್ತಿ ಹಿಡಿದಾಗ ನಮಗೆ ಈ ಯೋಜನೆ ಸಂಪೂರ್ಣ ಆದರೆಷ್ಟು ಬಿಟ್ಟರೆಷ್ಟು ನಮಗೆ ಪ್ರಚಾರಕ್ಕೆ ಈ ಕಾರ್ಯಕ್ರಮ ಮಾಡಬೇಕು ಎಂದವರು ಕುಮಾರಸ್ವಾಮಿ ಅಲ್ಲ ಇದೇ ಬಿಜೆಪಿ ನಾಯಕರು.
ಯಾರ್ಯಾರು ಏನೇನು ಮಾತನಾಡಿದರು ಅವರೆಲ್ಲಾ ಬದುಕಿದ್ದಾರೆ. ಇದರಲ್ಲಿ ನಾನು ಸುಳ್ಳೆಳುವ ಪ್ರಶ್ನೆಯೇ ಇಲ್ಲ. ಎರೆನೇ ಬಾರಿ ಮುಖ್ಯಮಂತ್ರಿಯಾದಾಗ ನೀರಾವರಿ ಸಚಿವರು ಯಾರು. ಕಾಂಗ್ರೆಸ್ ಪಕ್ಷದ ಮಹಾನಾಯಕರು. ನಾನು ಯಾವುದಕ್ಕೊ ತಲೆ ಹಾಕುವ ಆಗಿರಲಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರು ನೀವ್ಯಾರು ತೆಗೆದುಕೊಳ್ಳುವುದಕ್ಕೆ ಎನ್ನುತ್ತಿದ್ದರು. ಈ ಎರಡು ರಾಷ್ಟ್ರೀಯ ಪಕ್ಷಗಳು ಇದನ್ನೇ ಹೇಳಿಕೊಂಡು ಬಂದವರು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.