ಬಸವತತ್ವ ದಿಂದ ಮಾತ್ರ ದೇಶದಲ್ಲಿ ಶಾಂತಿ ನೆಲಸಲು ಸಾಧ್ಯ : ಬಸವ ಪ್ರಭು ಸ್ವಾಮೀಜಿ.

suddionenews
1 Min Read

ಬೆಂಗಳೂರು, (ಮೇ.07) : ಈ ದೇಶದಲ್ಲಿ ಶಾಂತಿ ನೆಲಸಲು ಬಸವತತ್ವ ಪಾಲನೆ ಅನಿವಾರ್ಯ ಎಂದು ದಾವಣಗೆರೆ ವಿರಕ್ತ ಮಲಠದ ಪೂಜ್ಯ ಶ್ರೀ ಬಸವ ಪ್ರಭು ಸ್ವಾಮೀಜಿಗಳು ಹೇಳಿದರು.

ವಿಜಯನಗರದಲ್ಲಿ ಬಸವ ಕೇಂದ್ರ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ,
ಈಗ ನಡೆಯುತ್ತಿರುವ ಯುದ್ಧಗಳು ಆಯಾ ದೇಶದಲ್ಲಿ ಅಶಾಂತಿ ಉಇಂಟುಮಾಡಿವೆ. ಅದರಿಂದ ದೇಶ ಮತ್ತು ದೇಹಕ್ಕೂ ಹಾನಿಯನ್ನು ನಾವು ನೋಡುತ್ತಿದ್ದೇವೆ. ಮೋಸ ವಂಚನೆಯಿಂದ ಕೋಟಿ ಕೋಟಿ ಹಣ ಸಂಪಾದಿಸುವುದು ಮುಖ್ಯವಲ್ಲ ಕಾಯಕ ನಿಷ್ಠೆಯಿಂದ ದುಡಿದ ಹಣ ಶ್ರೇಷ್ಠವಾದುದು. ಎಲ್ಲರೂ ದಾಸೋಹ ಮನೋಭಾವದಿಂದ ಇಂದು ಸೇವೆ ಮಾಡಿ ಅದೇ ನಿಮಗೆ ದುಪ್ಪಟ್ಟಾಗುತ್ತದೆ ಎಂದರು.

ಖ್ಯಾತ ಗಾಯಕ ಶಶಿಧರ್ ಕೋಟೆ ಮಾತನಾಡಿ ಗುರುಗಳ ಮಾರ್ಗದಲ್ಲಿ ಇಂದು ನಾವೆಲ್ಲ ಹೋದರೆ ಮಾತ್ರ ನಮ್ಮ ನೆಲ ಜಲ ದೇಶ ಉಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿವಾಗಿ ಮಾತನಾಡಿದ ಬಸವ ಕೇಂದ್ರದ ಅಧ್ಯಕ್ಷರಾದ ಅರುಣ್ ಕುಮಾರ್ ಡಿ. ಟಿ ಮಾತನಾಡಿ ನಾಡಿನಾದ್ಯಂತ  ಬಸವ ಕೇಂದ್ರಗಳ ಕಾರ್ಯಗಳನ್ನು  ವಿವರಿಸಿದರು.

ಈ ಕಾಯ ಬಂದಿರುವಿದೇಕೆ ? ವಿಷಯದ ಬಗ್ಗೆ ಕೃಷ್ಣ ಬಾಯಿ ಉಪನ್ಯಾಸ ನೀಡಿದರು.

ಮಾಗಡಿ ರಸ್ತೆ ಪೊಲೀಸ್ ಸಬ್ ಇನ್ಸಪೆಕ್ಟರ್ ಕು.ಸುಮಂಗಲ, ಬಸವ ತತ್ವದ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋದಲ್ಲಿ ಕ್ರೈಮ್ ಗಳು ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯ ದಾಸೇಗೌಡ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.

ದಾಸೋಹ ಮಾಡಿದ ಶಿವಪ್ರಕಾಶ್ ಹಾಗೂ ವಚನಗಯನ ಮಾಡಿದ ಪೇಮ ಶಾಂತವೀರಯ್ಯ ಅವರಿಗೆ ಸನ್ಮಾನಿಸಲಾಯಿತು. ಅಮೃತ್ ದೂಪ್ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *