Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಲಾಲ್ ಕಟ್ ಬ್ಯಾನ್ ವಿಚಾರ : ಹಿಂದೂ ಸಂಘಟನೆ ಮಾಡಿದ್ದು ಸರಿ ಎಂದ ಸಚಿವೆ ಜೊಲ್ಲೆ

Facebook
Twitter
Telegram
WhatsApp

ಚಿಕ್ಕೋಡಿ: ಇಂದು ಯುಗಾದಿ ಹಬ್ಬ. ನಾಳೆ ಎಲ್ಲೆಡೆ ಹೊಸ ತಡುಕು. ಮಾಂಸ ಖರೀದಿ ಮಾಡಲು ಮುಸ್ಲಿಂ ಅಂಗಡಿಗೆ ಹೋಗಬೇಡಿ, ಹಲಾಲ್ ಕಟ್ ನಿಷೇಧಿಸಿ ಎಂದು ಈಗಾಗಲೇ ಹೇಳಲಾಗುತ್ತಿದೆ. ಈ ಸಂಬಂಧ ಸಚುವೆ ಶಶಿಕಲಾ ಜೊಲ್ಲೆ ಮಾತನಾಡಿದ್ದು, ವಿಶ್ವ ಹಿಂದೂಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಹಲಾಲ್ ಕಟ್ ನಿಷೇಧ ಮಾಡುತ್ತಿದ್ದಾರೆ. ಸರ್ಕಾರ ಆ ಬಗ್ಗೆ ಚಿಂತನೆ ಮಾಡುತ್ತೆ. ಅದರ ಜೊತೆಗೆ ನಮ್ಮ ಹಿರಿಯ ಸಚಿವರು ಜೊತೆಗೆ ನಮ್ಮ ಸಿಎಂ ಕೂಡ ಆ ಬಗ್ಗೆ ಚಿಂತನೆ ಮಾಡುತ್ತಾರೆ ಅನ್ನೋದು ಅಭಿಪ್ರಾಯವಾಗಿದೆ.

ಈಗ ಹಲಾಲ್ ಕಟ್ ಅನ್ನೋದನ್ನ ಅವರು ತಮ್ಮ ದೇವರಿಗೆ ಅರ್ಪಣೆ ಮಾಡಿರುತ್ತಾರೆ ಅನ್ನೋದು ನಮಗೆ ಗೊತ್ತಾಗುತ್ತೆ. ಆ ವಿಚಾರ ಎಲ್ಲಾ ಕಡೆಗೂ ಹರಿದಾಡುತ್ತಿದೆ. ಹೀಗಾಗಿ ನಾವೂ ಕೂಡ ಅದನ್ನ ನಿಷೇಧ ಮಾಡಿದ್ದೇವೆ. ಅದರ ಬದಲಿಗೆ ಜಟ್ಕಾ ಕಟ್ ಮಾಡಿರುವುದನ್ನ ತೆಗೆದುಕೊಳ್ಳುವಂತದ್ದು ಆಗಬೇಕು ಎಂಬ ಅಭಿಪ್ರಾಯ ಇದೆ. ಆದರೆ ಆ ಬಗ್ಗೆಯೂ ನಾವೂ ಚಿಂತನೆ ಮಾಡಬೇಕಿದೆ. ಅವರು ಯಾವ ರೀತಿ ಆ ಕಟ್ ಮಾಡುತ್ತಿದ್ದರು. ಅದನ್ನ ಅವರ ದೇವರಿಗೆ ಅರ್ಪಿಸುತ್ತಿದ್ದರ..? ನಾವೂ ಅದನ್ನ ದೂಷಿತ ರಕ್ತ ಹೋಗಬೇಕು ಎಂಬ ಕಾರಣಕ್ಕೆ ಆ ರೀತಿ ಕಟ್ ಮಾಡುತ್ತೇವೆ ಅಂತ ಹೇಳುತ್ತಾ ಇದ್ದರು. ಆ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತೆ ಎಂದಿದ್ದಾರೆ.

ನಾನು ಆ ಬಗ್ಗೆ ಏನನ್ನು ಹೇಳಲು ಬಯಸಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟಾಗಿ ಇಲ್ಲ. ಹಿಂದೂ ಪರ ಸಂಘಟನೆಗಳು‌ ಮಾಡುತ್ತಿರುವುದು ಸರಿ ಅನ್ನಿಸುತ್ತೆ. ಜಟ್ಕಾ ಕಟ್ ಬಗ್ಗೆ ಜಾಗೃತಿ‌ ಮೂಡಿಸಬೇಕಾಗಿದೆ. ನಾವೂ ಹಿಂದೂ ಪರ ಸಂಘಟನೆ ಪರ ಇದ್ದೇವೆ. ಆದರೆ ಜವಬ್ದಾರಿಯುತ ಸಚುವೆಯಾಗಿ ಆ ಬಗ್ಗೆ ತಿಳಿದುಕೊಳ್ಳದೆ ಮಾತನಾಡುವುದಿಲ್ಲ. ಹಲಾಲ್ ಮತ್ತು ಜಟ್ಕಾ ಕಟ್ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!