ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 28 : 2023ರ ಚುನಾವಣೆಯಲ್ಲಿ ಗ್ಯಾರಂಟಿ ಹೆಸರಿನಲ್ಲಿ ಬಡವರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರುವರೆ ವರ್ಷಗಳಿಂದ ದುರಾಡಳಿತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಸ್ವಾತಂತ್ರ್ಯ ಬಂದು 79 ವರ್ಷಗಳಲ್ಲಿ ಯಾವ ಸರ್ಕಾರವೂ ಹುಟ್ಟಿನಿಂದ ಸಾವಿನವರೆಗೂ ತೆರಿಗೆ ಹಾಕಿರಲಿಲ್ಲ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ದಲಿತರ ಹಣ 52 ಸಾವಿರ ಕೋಟಿ ರೂಪಾಯಿಯನ್ನು ಲೂಟಿ ಮಾಡಿ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ಸಂಸದ ಗೋವಿಂದ ಕಾರಜೋಳ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹಿರಿಯೂರಿನಲ್ಲಿ ಶನಿವಾರ ಬಿಜೆಪಿವತಿಯಿಂದ ಹಮ್ಮಿಕೊಂಡಿದ್ದ ದರ ಏರಿಕೆಯ ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದರು, .ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ಬರ ಪರಿಸ್ಥಿತಿಯ ವಿರುದ್ಧ ಕಾವೇರಿಯಿಂದ ಭೀಮಾನದಿವರೆಗೆ ಮತ್ತು ಔರಾದ್ನಿಂದ ಕೊಳ್ಳೇಗಾಲದವರೆಗೆ ಹೋರಾಟ ಕೈಗೊಂಡಿದ್ದು, ವಿಧಾನಸೌಧದಿಂದ ಕಾಂಗ್ರೆಸ್ ಅನ್ನು ಖಾಲಿ ಮಾಡಿಸುವವರೆಗೂ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಸ್ಸಿ, ಎಸ್ಟಿ ಮೀಸಲಾತಿ ಯನ್ನು ಹೆಚ್ಚು ಮಾಡಿದ್ದನ್ನು ಕಡಿಮೆ ಮಾಡಿರುವ ಹಾಗೂ ಒಳ ಮೀಸಲಾತಿಯಲ್ಲಿ ದಲಿತರಿಗೆ ಅನ್ಯಾಯ ಮಾಡಿರುವ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ರೈತರ ಸಂಪತ್ತಾಗಿರುವ ದನಕರುಗಳಿಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ತೊಂದರೆಯಾಗಿದೆ ಕುರಿ ಸಾಕಾಣಿಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕುರಿಗಳಿಗೆ ಮೇವಿಲ್ಲ, ಕುಡಿಸಲು ನೀರಿಲ್ಲ ಹಾಗೂ ಪ್ರತಿ ಹಳ್ಳಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ ಸ್ವಾತಂತ್ರ್ಯ ಬಂದು 79 ವರ್ಷಗಳಲ್ಲಿ ಯಾವ ಸರ್ಕಾರವೂ ಹುಟ್ಟಿನಿಂದ ಸಾವಿನವರೆಗೂ ತೆರಿಗೆ ಹಾಕಿರಲಿಲ್ಲ; ಆದರೆ ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಎರಡು ರೂಪಾಯಿ ಇದ್ದ ಶುಲ್ಕವನ್ನು 50 ರೂಪಾಯಿ, 100 ರೂಪಾಯಿ ಪಡೆಯುವ ಮೂಲಕ ಈ ಸರ್ಕಾರ ಜನರಿಗೆ ಹೊರೆಯಾಗಿದೆ ಎಂದು ಹೇಳಿದ್ದಾರೆ.
ಹಿರಿಯೂರಿಗೆ ನಾಲ್ಕು ಬಾರಿ ಬಂದ ಮುಖ್ಯಮಂತ್ರಿಗಳು ಹಾಗೂ ನಾಯಕರು ಉಪಚುನಾವಣೆಯ ಸಂದರ್ಭ ದಲ್ಲಿ 2,200 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ ಆದರೆ ಡಿ.ಕೆ. ಶಿವಕುಮಾರ್ ಅವರು 35-40 ವರ್ಷ ರಾಜಕಾರಣ ಮತ್ತು ಅಧಿಕಾರದಲ್ಲಿದ್ದರೂ ಹಿಂದೆಂದೂ ಹಿರಿಯೂರಿಗೆ ಬಂದಿರಲಿಲ್ಲ ಕನಕಪುರದಷ್ಟೇ ಆದ್ಯತೆಯನ್ನು ಹಿರಿಯೂರಿಗೆ ನೀಡುವುದಾಗಿ ಹೇಳುತ್ತಿದ್ದು, ಮೂರುವರೆ ವರ್ಷದಿಂದ ಏಕೆ ಕೊಡಲಿಲ್ಲ. ಚುನಾವಣೆ ಬಂದಾಗ ಜನರಿಗೆ ಮೋಸ ಮಾಡಿ ಮತ ಪಡೆದು, ನಂತರ ಹಿರಿಯೂರನ್ನು ಮೊದಲಿದ್ದ ಸ್ಥಿತಿಯಲ್ಲೇ ಇಡುತ್ತಾರೆ ಎಂದು ಆರೋಪಿಸಿ ಹಾಲು, ತರಕಾರಿ, ಕಾಳುಕಡಿ, ಅಕ್ಕಿ ಮತ್ತು ಜೋಳದ ದರ ಹೆಚ್ಚಾಗಿ ಸಾಮಾನ್ಯ ಜನರು ಬದುಕಲು ಕಷ್ಟವಾಗಿದೆ ಐದು ಗ್ಯಾರಂಟಿ ನೀಡಿ ಉದ್ಧಾರ ಮಾಡಲಾಗಿದೆ ಯಾರು ಉದ್ಧಾರವಾಗಿದ್ದಾರೆ ಎಂಬುದು ಗೊತ್ತಿಲ್ಲ; ಆದರೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಉದ್ಧಾರವಾಗಿದ್ದಾರೆಯೇ ಹೊರತು ಬಡವರಲ್ಲ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಉಳಿದು ಉಳಿದೆಲ್ಲ ಕಡೆ ಸೋತಿದೆ ಎಸ್.ಐ.ಅರ್ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಮಾತ್ರ ಭಯವಿದೆ ರಾಹುಲ್ ಗಾಂಧಿ ಅವರು 1994ರಿಂದ ಬ್ರಿಟಿಷ್ ಪೌರತ್ವ ಪಡೆದ ವಿದೇಶಿ ಪ್ರಜೆಯಾಗಿದ್ದು, ಬೇರೆ ದೇಶದ ಪೌರತ್ವ ಪಡೆದವರು ಶಾಸಕ, ಸಂಸದ ಆಗಲು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಬರುವುದಿಲ್ಲ ಎಂಬ ಅನರ್ಹತೆಯ ಭೀತಿ ಅವರಿಗೆ ಕಾಡುತ್ತಿದೆ ಇದರಿಂದ ಎಸ್.ಐ.ಆರ್ನ್ನು ವಿರೋಧ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಹಾಗೂ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಎಲ್ಲರೂ ಸಜ್ಜಾಗಬೇಕು ಎಂದು ಕಾರ್ಯಕರ್ತರಿಗೆ ಸಂಸದರು ಕರೆ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ನಿಕಟಪೂರ್ವ ಅಧ್ಯಕ್ಷರೂ, ದಾವಣಗೆರೆ ವಿಭಾಗದ ಸಹ ಪ್ರಭಾರಿಗಳಾದ ಎ.ಮುರಳಿ ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಜನರು ಜಾಗೃತರಾಗಬೇಕು; ಹಿರಿಯೂರು ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ತಕ್ಕ ಸಂದೇಶ ರವಾನಿಸಿ, ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಹೋರಾಟವನ್ನು ಮುಂದುವರಿಸಬೇಕು, ಇಂದಿನ ಹೋರಾಟವು ಸಾಂಕೇತಿಕವಾಗಿದ್ದರೂ, ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ಮುಂದುವರಿಯಲಿದೆ 2023ರಲ್ಲಿ ಅಹಿಂದ ಹೆಸರಿನಲ್ಲಿ ಹಾಗೂ ಹಿಂದುಳಿದ ವರ್ಗ, ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಧಾರದ ಭರವಸೆ ಮತ್ತು ಖಾತರಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಕಳೆದ ಮೂರೂವರೆ ವರ್ಷಗಳಲ್ಲಿ ಕೇವಲ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.
ಬೆಳಗಿನ ಜಾವ ಹಾಲಿನಿಂದ ಆರಂಭವಾಗಿ ರಾತ್ರಿ ಮಲಗುವ ತನಕ ಎಲ್ಲಾ ಹಂತಗಳಲ್ಲೂ ಬೆಲೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಇಂತಹ ಬೆಲೆ ಏರಿಕೆ ಮಾಡಿದ ಸರ್ಕಾರ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವಾಗಿದೆಭೀಕರ ಬರಗಾಲ ಮತ್ತು ರೈತರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸರ್ಕಾರವು ರೈತರ ವಿರೋಧಿಯಾಗಿ ನಡೆದುಕೊಂಡಿದೆ ಮಹಿಳೆಯರಿಗೆ 2,000 ರೂಪಾಯಿ ನೀಡುವುದಾಗಿ ಹಾಗೂ ಶಕ್ತಿ ಯೋಜನೆಯಡಿ ಬಸ್ಗಳಲ್ಲಿ ಸಂಚರಿಸುವುದಾಗಿ ಹೇಳಿ, ಹಲವು ತಿಂಗಳು ಖಾತೆಗಳಿಗೆ ಹಣ ಬರದಂತೆ ಮಾಡಿ ಜನರಿಗೆ ಸುಳ್ಳು ಹೇಳಿದ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರದಲ್ಲಿ ನೀಡಲಾಗಿದ್ದ ರೈತ ನಿಧಿ, ವಿದ್ಯಾನಿಧಿ, ಭಾಗ್ಯಲಕ್ಷ್ಮಿ ಯೋಜನೆ ಮತ್ತು ಸೈಕಲ್ ಯೋಜನೆಗಳನ್ನು ಪ್ರಸ್ತುತ ಸರ್ಕಾರ ಬಂದ ನಂತರ ನಿಲ್ಲಿಸಲಾಗಿದೆ ಎಂದು ಆರೋಪಿಸಲಾಯಿತು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಬೇಕು ಹಾಗೂ ಮುಂದಿನ 28ನೇ ಸಾಲಿನಲ್ಲಿಯೂ ಭಾರತೀಯ ಜನತಾ ಪಾರ್ಟಿ ಮತ್ತು ಎನ್ಡಿಎ ನೇತೃತ್ವದ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರೀಶ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಬಿಸಿಲು ಮತ್ತು ಚಳಿಯಲ್ಲಿ ಬೆಂಗಳೂರಿನ ಪ್ರತಿಭಟನೆ ನಡೆಸುತ್ತಿರುವ ವೇಳೆ, ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಎಲ್ಲವನ್ನೂ ಮರೆತು ಜಪಾನ್ಗೆ ವ್ಯವಹಾರದ ಉದ್ದೇಶದಿಂದ ತೆರಳಿದ್ದಾರೆ ಇಂತಹ ಸರ್ಕಾರ ರಾಜ್ಯದಲ್ಲಿ ಇರಬೇಕೇ ಅಥವಾ ಬೇಡವೇ ಎಂಬುದನ್ನು ಜನರು ತೀರ್ಮಾನಿಸಬೇಕಾಗಿದೆ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲಿನಿಂದ ಹಿಡಿದು ಅಬಕಾರಿವರೆಗೂ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ದರಗಳನ್ನು ಏರಿಸಲಾಗಿದೆ ಸರ್ಕಾರದ ಆಡಳಿತ ವೈಫಲ್ಯ ಮತ್ತು ಬೆಲೆ ಏರಿಕೆಯ ವಿರುದ್ಧ ಸಂಘಟಿತರಾಗಿ, ಸರ್ಕಾರದ ವೈಫಲ್ಯಗಳನ್ನು ಗ್ರಾಮ ಪಂಚಾಯತಿ ಮಟ್ಟದವರೆಗೂ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಹೋರಾಟವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕಾಡುಗೊಲ್ಲ ಸಮಾಜದ ರಾಜಣ್ಣ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಅಭಿನಂದನ್, ಮುಖಂಡರಾದ ಲಕ್ಷ್ಮೀಕಾಂತ್, ಮೀಸೆ ಮಹಾಲಿಂಗಪ್ಪ, ಎಸ್ಟಿ ಮೋರ್ಚಾದ ಅಧ್ಯಕ್ಷರಾದ ಸಿ.ಬಿ. ರಾಜು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ನೌಷಾದ್, ನಗರಸಭೆಯ ಮಾಜಿ ಅಧ್ಯಕ್ಷರಾದ ಮಂಜುಳ, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು, ಹಿರಿಯೂರಿನ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಿದ ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ದಾರಿಯುದ್ದಕ್ಕೂ ರಾಜದ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.












