ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 20 : ಬೋರ್‍ವೆಲ್ ಕೊರೆಸಲು ಒಂದು ಅಡಿಗೆ 30 ರೂ.ಹೆಚ್ಚಳವಾಗಿರುವುದರಿಂದ ಬೋರ್‍ವೆಲ್ ಮಾಲೀಕರ ಸಭೆ ಕರೆದು ಹಿಂದಿನ ದರದಂತೆ ಬೋರ್‍ವೆಲ್‍ಗಳನ್ನು ಕೊರೆಯಲು ಸೂಚಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಡೀಸೆಲ್ ದರ ಹಾಗೂ ಯಾವುದೇ ಉಪಕರಣಗಳ ಬೆಲೆ ಜಾಸ್ತಿಯಾಗಿಲ್ಲದಿದ್ದರು ಏಕಾಏಕಿ ಬೋರ್‍ವೆಲ್ ಕೊರೆಯುವ ದರವನ್ನು ಏರಿಸಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಮೊದಲೆ ಜಿಲ್ಲೆಯಲ್ಲಿ ಬರಗಾಲವಿದೆ. ಕಬ್ಬಿನ ದರ ಹೆಚ್ಚಿಸಿ ರೈತರ ನೆರವಿಗೆ ಬರುವಂತೆ ಸರ್ಕಾರವನ್ನು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಹೋರಾಟ ನಡೆಸಿರುವ ರೈತರನ್ನು ಬಂಧಿಸಿರುವುದು ಖಂಡನೀಯ. ಒಂದು ಟನ್ ಕಬ್ಬಿಗೆ 4 ಸಾವಿರ ರೂ.ಗಳ ದರ ನಿಗಧಿಪಡಿಸಬೇಕು. ಕೂಡಲೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಪಾವತಿಸುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.











