ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 20 : ಐತಿಹಾಸಿಕ ಕೋಟೆ, ಸ್ಮಾರಕಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಚಿತ್ರದುರ್ಗ ಎಂದಾಕ್ಷಣ ಕೋಟೆ, ಮದಕರಿನಾಯಕರ ನೆನಪಾಗುತ್ತದೆಂದು ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸಹಾಯಕ ನಿರ್ದೇಶಕ ಕಚೇರಿ, ಸರ್ಕಾರಿ ವಸ್ತು ಸಂಗ್ರಹಾಲಯ ಚಿತ್ರದುರ್ಗ, ಜಿಲ್ಲಾ ಮದಕರಿನಾಯಕ ವಿದ್ಯಾ ಸಂಸ್ಥೆ ಮತ್ತು ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ವಿಶ್ವ ಪರಂಪರೆ ಸಪ್ತಾಹದ ಪ್ರಯುಕ್ತ ಲಾಲ್ ಕೋಟೆ ಬಾಗಿಲು ಬಳಿ ಶುಕ್ರವಾರ
ಹಮ್ಮಿಕೊಳ್ಳಲಾಗಿದ್ದ ಸ್ಮಾರಕ ಸ್ವಚ್ಚತೆ ಹಾಗೂ ಪರಂಪರೆ ನಡಿಗೆ ಉದ್ಘಾಟಿಸಿ ಮಾತನಾಡಿದರು.

ಹಿರಿಯರು, ಪೂರ್ವಿಕರು ಶ್ರಮಪಟ್ಟು ಕಟ್ಟಿರುವ ಕೋಟೆ, ಸ್ಮಾರಕಗಳನ್ನು ರಕ್ಷಿಸಲು ಪುರಾತತ್ವ ಇಲಾಖೆಯಿದೆ. ನಮ್ಮ ಕೆಲಸವಲ್ಲ ಎಂದು ಅಂದುಕೊಳ್ಳುವುದು ತಪ್ಪು. ವಿವಿಧ ಸಂಘನೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಹಿರಿಯರು ಕಟ್ಟಿರುವ ಕೋಟೆ, ಕೊತ್ತಲ, ದೇವಾಲಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು. ಲಾಲ್ ಕೋಟೆ ಬಾಗಿಲಿನಿಂದ ಯಾವ ಶತ್ರುವು ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ಇಂತಹ ಸ್ಮಾರಕಗಳು ನಾಶವಾಗಲು ಬಿಡಬಾರದು. ದೊಡ್ಡ ದೊಡ್ಡ ಬಂಡೆಗಳ ನಡುವೆ ಗಿಡ-ಮರಗಳು ಬೆಳೆದಿರುವುದರಿಂದ ಕ್ರಮೇಣ ಸಡಿಲಗೊಳ್ಳುತ್ತದೆ ಎಂದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರಾದ ಜಿ.ಪ್ರಹ್ಲಾದ್ ಮಾತನಾಡುತ್ತ ವಿದ್ಯಾರ್ಥಿಗಳು, ಪ್ರವಾಸಿಗರು, ಸಂಘಟನೆಗಳವರು
ಸಾರ್ವಜನಿಕರು ಮನಸ್ಸು ಮಾಡಿದರೆ ಸ್ಮಾರಕಗಳು ಹಾಗೂ ಕೋಟೆ ಕೊತ್ತಲಗಳನ್ನು ಉಳಿಸಬಹುದು. ಮದಕರಿನಾಯಕರ ಕಾಲದಲ್ಲಿ ನಿರ್ಮಾಣಗೊಂಡಿರುವ ಅನೇಕ ಪಾರಂಪರಿಕ ಸ್ಥಳಗಳನ್ನು ಜೋಪಾನವಾಗಿ ಕಾಪಾಡಬೇಕಿದೆ ಎಂದು ಅರಿವು ಮೂಡಿಸಿದರು.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಾಗರ್, ಮಹಾರಾಣಿ ಕಾಲೇಜಿನ ಪ್ರಾಚಾರ್ಯರಾದ ಟಿ.ಜಯಣ್ಣ, ಸಿಬ್ಬಂದಿ ವರ್ಗದವರಾದ ಪರಮೇಶ್ವರಪ್ಪ, ಪ್ರಸನ್ನ ಬಾಬು, ನಾಗರಾಜು, ಉಮೇಶ್, ಕಾಂತರಾಜ್, ದೇವರಾಜ್, ಉಮೇಶ್ ಹಾಗೂ ಉಮಾಶಂಕರ್ ಮತ್ತು ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿಗಳು, ಪ್ರವಾಸಿ ಮಿತ್ರರು ಈ ಸಂದರ್ಭದಲ್ಲಿ ಹಾಜರಿದ್ದರು.











