ಬೆಂಗಳೂರು : ಆಭರಣ ಪ್ರಿಯರಿಗೆ ಸಿಹಿಸುದ್ದಿ, ಬೆಂಗಳೂರು ನಗರ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ಮತ್ತು ಮದುವೆ ಸೀಸನ್ನಲ್ಲಿ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಈ ಬೆಲೆ ಇಳಿಕೆ ತುಸು ನೆಮ್ಮದಿ ತಂದಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ?
ಬೆಂಗಳೂರಿನ ಮಾರುಕಟ್ಟೆಯ ಇಂದಿನ ದರದ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂಪಾಯಿ ಇಳಿಕೆಯಾಗಿದ್ದು, 1,25,400 ರೂಪಾಯಿಗೆ ತಲುಪಿದೆ. ಅದೇ ರೀತಿ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನದ ದರದಲ್ಲಿ 820 ರೂಪಾಯಿ ಕಡಿತವಾಗಿದ್ದು, 1,36,800 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು 18 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 620 ರೂಪಾಯಿ ಇಳಿಕೆಯಾಗಿ 1,02,690 ರೂಪಾಯಿ ದಾಖಲಾಗಿದೆ.
ಚೆನ್ನೈ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ವಿವರ
ಚೆನ್ನೈನಲ್ಲೂ ಸಹ ಚಿನ್ನದ ದರ ಬೆಂಗಳೂರಿನಂತೆಯೇ ಇಳಿಕೆಯ ಹಾದಿ ಹಿಡಿದಿದೆ. ಇಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 750 ರೂಪಾಯಿ ಕಡಿಮೆಯಾಗಿ 1,25,400 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 820 ರೂಪಾಯಿ ಇಳಿಕೆಯೊಂದಿಗೆ 1,36,800 ರೂಪಾಯಿ ಹಾಗೂ 18 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 620 ರೂಪಾಯಿ ಇಳಿಕೆಯಾಗಿ 1,02,690 ರೂಪಾಯಿಗೆ ಬಂದು ನಿಂತಿದೆ.
ಬೆಳ್ಳಿ ದರ ಮತ್ತು ಮಾರುಕಟ್ಟೆಯ ಏರಿಳಿತ
ಬೆಂಗಳೂರು ಮತ್ತು ಚೆನ್ನೈ ಎರಡೂ ನಗರಗಳಲ್ಲಿ ಇಂದು ಒಂದು ಕೆಜಿ ಬೆಳ್ಳಿಯ ದರ 1,90,000 ರೂಪಾಯಿ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರವಾಗಿ ಏರಿಳಿತ ಕಾಣುತ್ತಿದೆ. ಕಳೆದ ಕೆಲವು ವಾರಗಳಿಂದ ಮದುವೆ ಸೀಸನ್ ನಡುವೆಯೂ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನ 1,30,000 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನ ಸುಮಾರು 1,40,000 ರೂಪಾಯಿ ಆಸುಪಾಸಿನಲ್ಲಿ ಏರಿಳಿತ ಕಂಡಿದೆ.
ಗ್ರಾಹಕರಿಗೆ ಮುಖ್ಯ ಸೂಚನೆ
ಇಲ್ಲಿ ನೀಡಲಾಗಿರುವ ದರಗಳು ಬೆಳಗ್ಗೆ 8 ಗಂಟೆಯ ವೇಳೆಗೆ ದಾಖಲಾದ ಬೆಲೆಗಳಾಗಿವೆ. ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ. ಇಲ್ಲಿ ಉಲ್ಲೇಖಿಸಿರುವುದು ನಿನ್ನೆಯ ಮುಕ್ತಾಯದ ದರಗಳಾಗಿದ್ದು, ಇಂದಿನ ವಹಿವಾಟು ಏರಿಕೆ ಅಥವಾ ಇಳಿಕೆಯೊಂದಿಗೆ ಆರಂಭವಾಗಬಹುದು. ಆದ್ದರಿಂದ ಚಿನ್ನ ಖರೀದಿಸುವ ಮುನ್ನ ಗ್ರಾಹಕರು ಆಯಾ ಸಮಯದ ಲೈವ್ ದರಗಳನ್ನು ಪರಿಶೀಲಿಸುವುದು ಸೂಕ್ತ.













