ಬಳ್ಳಾರಿ : ವಾಹನ ಸವಾರರಿಗೆ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಬಾಕಿ ಇರುವ ಟ್ರಾಫಿಕ್ ದಂಡದ ಮೇಲೆ ಶೇಕಡಾ 50 ರಷ್ಟು ಭಾರಿ ರಿಯಾಯಿತಿಯನ್ನು ಘೋಷಿಸಿದೆ. ದಂಡ ಪಾವತಿಸಲು ನವೆಂಬರ್ 21 ರಿಂದ ಡಿಸೆಂಬರ್ 11 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಈ ಕೆಳಗಿನ ಮೂರು ಸರಳ ವಿಧಾನಗಳ ಮೂಲಕ ತಮ್ಮ ಬಾಕಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿಸಬಹುದಾಗಿದೆ:
ಪೊಲೀಸ್ ಠಾಣೆಗಳಲ್ಲಿ ಪಾವತಿ: ಸಂಚಾರ ಪೊಲೀಸ್ ಠಾಣೆಗಳಲ್ಲಿ, ಸಂಚಾರ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಬಳಿ, ಹಾಗೂ ಜಿಲ್ಲೆಯ ಯಾವುದೇ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಳೆಯ FTVR ಇ-ಚಲನ್ (e-challan) ದಂಡವನ್ನು ಪಾವತಿಸಬಹುದು.
ಅಂಚೆ ಕಚೇರಿಗಳ (Post Office) ಮೂಲಕ: ಸಾರ್ವಜನಿಕರು ತಮ್ಮ ಸಮೀಪದ ಪೋಸ್ಟ್ ಆಫೀಸ್ಗಳಿಗೆ ಭೇಟಿ ನೀಡುವ ಮೂಲಕವೂ ಈ ಟ್ರಾಫಿಕ್ ದಂಡವನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್ಲೈನ್ ಮೂಲಕ ಪಾವತಿ: ಪ್ರಕಟಣೆಯಲ್ಲಿ ನೀಡಲಾಗಿರುವ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ https://103.195.218.159/challan ಲಿಂಕ್ ಬಳಸಿಕೊಂಡು ಆನ್ಲೈನ್ ಮೂಲಕ ದಂಡ ಪಾವತಿಸಬಹುದು. ನಾಗರಿಕರು ತಮ್ಮ ಯುಪಿಐ (UPI), ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ಗಳನ್ನು ಬಳಸಿ ಮನೆಯಲ್ಲೇ ಕುಳಿತು ಸುಲಭವಾಗಿ ದಂಡ ಪಾವತಿಸಬಹುದಾಗಿದೆ.
ಸಾರ್ವಜನಿಕರು ಈ ರಿಯಾಯಿತಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡವನ್ನು ಶೀಘ್ರವಾಗಿ ಪಾವತಿಸುವಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯು ಕೋರಿದೆ.












