Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಎಂ ಕಿಸಾನ್ ಯೋಜನೆ: 2-3 ವರ್ಷಗಳಿಂದ ಹಣ ಬಂದಿಲ್ಲವೇ? ರೈತರಿಗೆ ಮಹತ್ವದ ಸೂಚನೆ

PM Kisan Scheme: Haven't received funds for 2–3 years? Important notice for farmers
---Advertisement---

ನವದೆಹಲಿ : ಪಿಎಂ ಕಿಸಾನ್ (PM-KISAN) ಯೋಜನೆಯಡಿ ಹೊಸದಾಗಿ ನೋಂದಣಿ ಮಾಡಿಸಿ ಅಥವಾ ಅರ್ಜಿ ಸಲ್ಲಿಸಿ ಕಳೆದ 2-3 ವರ್ಷಗಳಿಂದ ಒಂದು ಕಂತು ಹಣವೂ ಬಾರದ ರೈತರಿಗೆ ಮಹತ್ವದ ಸೂಚನೆಯೊಂದನ್ನು ನೀಡಲಾಗಿದೆ. ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ, ನೋಂದಣಿಯಾಗಿ PMK ID ಬಂದಿದ್ದರೂ ಇದುವರೆಗೂ ಒಂದೂ ಕಂತು ಹಣ ಸಂದಾಯವಾಗದ ರೈತರು ಕಡ್ಡಾಯವಾಗಿ ‘ಸ್ವಯಂ ನೋಂದಣಿ’ (Self Registration) ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಕೃಷಿ ಇಲಾಖೆಯಿಂದ PMK ID ಮಾಡಿಸಿದ ನಂತರವೇ ಈ ಸ್ವಯಂ ನೋಂದಣಿ ಪ್ರಕ್ರಿಯೆ ಮಾಡಿಸಬೇಕಿದ್ದು, ರೈತರು ತಮ್ಮ ಹತ್ತಿರದ ಸಿಎಸ್‌ಸಿ (ಸಾಮಾನ್ಯ ಸೇವಾ ಕೇಂದ್ರ / Common Service Center) ಅಥವಾ ಗ್ರಾಮ ಒನ್ (Grama One) ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಸ್ವಯಂ ನೋಂದಣಿಗೆ ಒದಗಿಸಬೇಕಾದ ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್

ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ

ಬ್ಯಾಂಕ್ ಪಾಸ್ ಬುಕ್

ಜಮೀನಿನ ಪಹಣಿ (RTC)

ಪೌತಿ ಖಾತೆ ಆಗಿದ್ದಲ್ಲಿ, ಪೌತಿ ಆದವರ ಆಧಾರ್ ಕಾರ್ಡ್

ರೈತರು ಗಮನಿಸಬೇಕಾದ ಪ್ರಮುಖ ಅಂಶಗಳು

ಮೇಲಿನ ಎಲ್ಲ ದಾಖಲಾತಿಗಳೊಂದಿಗೆ ಹತ್ತಿರದ CSC ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ PM-Kisan Self Registration ಮಾಡಿಸಿಕೊಳ್ಳಬೇಕು.

ಸ್ವಯಂ ನೋಂದಣಿ ಮಾಡಿದ ತಕ್ಷಣವೇ ಖಾತೆಗೆ ಹಣ ಬರುವುದಿಲ್ಲ; ಸಲ್ಲಿಸಿದ ಅರ್ಜಿಯನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಬೇಕಾಗುತ್ತದೆ.

ಕಿಸಾನ್ ಯೋಜನೆಗೆ E-KYC ಮಾಡಿಸುವುದು ಕಡ್ಡಾಯವಾಗಿದೆ.

Join WhatsApp

Join Now

Join Telegram

Join Now