ಬೆಂಗಳೂರು: ಕಲಾಪಕ್ಕೆ ಸಚಿವರು ಗೈರಾಗುತ್ತಿರುವುದಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೇಸರದಲ್ಲೇ ಸಭಾ ನಾಯಕರಿಗೆ ಪತ್ರ ಬರೆದಿದ್ದಾರೆ.
ಪರಿಷತ್ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿಗೆ ಪತ್ರ ಬರೆದಿರುವ ಹೊರಟ್ಟಿ ಅವರು, ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸಚಿವರು ಉತ್ತರ ಕೊಡುತ್ತಿಲ್ಲ. ಉತ್ತರಿಸದೇ 4-5 ವಾರಗಳ ಕಾಲಾವಕಾಶ ಕೇಳುತ್ತಿರುವುದು ಸರಿಯಲ್ಲ. ಸದಸ್ಯರು 51 ಪ್ರಶ್ನೆಗಳಿಗೆ ಸಚಿವರು ಸಮಯಾವಕಾಶ ಕೇಳಿದ್ದಾರೆ.
ಎಲ್ಲಾ ಸಚಿವರು ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಬೇಕು. ಈ ಸಂಬಂಧ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಕೋಟಾ ಶ್ರೀನಿವಾಸ್ ಪೂಜಾರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.