Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೆಂಬಲಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ: ಮಾ.30 ನೋಂದಣಿಗೆ ಕಡೆ ದಿನ

Facebook
Twitter
Telegram
WhatsApp

ಚಿತ್ರದುರ್ಗ, (ಮಾರ್ಚ್.16) : ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಬೆಂಬಲಬೆಲೆ ಯೋಜನೆಯಡಿಯಲ್ಲಿ ಕಡಲೆಕಾಳು ಖರೀದಿಸಲು ರೈತರು ಸಂಬಂಧ ಪಟ್ಟ ಸಹಕಾರ ಸಂಘಗಳಲ್ಲಿ ಕೂಡಲೇ ನೊಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ. ಮಾರ್ಚ್ 30 ನೋಂದಣಿಗೆ ಕೊನೆಯ ದಿನವಾಗಿದೆ.

 

ಜಿಲ್ಲಾಧಿಕಾರಿ ಆದೇಶದಂತೆ ಏಪ್ರಿಲ್ 01 ರಿಂದ ಖರೀದಿ ಕೇಂದ್ರಗಳನ್ನು ಮಾಡಲಾಗುವುದು. ಪ್ರತಿ ರೈತರಿಗೆ ಎಕೆರೆಗೆ 4 ಕ್ವಿಂಟಾಲ್‍ನಂತೆ ಗರಿಷ್ಠ 15 ಕ್ವಿಂಟಾಲ್ ಖರೀದಿಸಲಾಗುವುದು.

ಪ್ರತಿ ಕ್ವಿಂಟಾಲ್‍ನ ದರ ರೂ.5,230/- ಗಳಾಗಿದ್ದು, ಎಫ್‍ಎಕ್ಯೂ ಗುಣಮಟ್ಟ ಹೊಂದಿರಬೇಕು.   ರೈತರು ಎಫ್‍ಐಡಿ ನಂಬರ್ ಮೂಲಕ ನೋಂದಾಯಿಸಬೇಕು. ಡೆಬಿಟಿ ಮೂಲಕ ರೈತರ ಖಾತೆಗೆ ಹಣ ವರ್ಗಾಯಿಸಲಾಗುವುದು. ಮಾರ್ಚ್ 30 ನೊಂದಣಿಗೆ ಕೊನೆಯ ದಿನ. ಈಗಾಗಲೇ ಜಿಲ್ಲೆಯಲ್ಲಿ ಇದುವರೆಗೂ ಸುಮಾರು 950 ರೈತರು ನೋಂದಣಿ ಮಾಡಿದ್ದಾರೆ.

ಕಡಲೆ ಖರೀದಿ ಕೇಂದ್ರಗಳ ವಿವರ:

ಚಿತ್ರದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ಟೌನ್ ಸಹಕಾರ ಸಂಘ,

ಮಾಡನಾಯಕಹಳ್ಳಿ ಸಹಕಾರ ಸಂಘ, ಚಿಕ್ಕಗೊಂಡನಹಳ್ಳಿ ಸಹಕಾರ ಸಂಘ,

ಚಳ್ಳಕೆರೆ ತಾಲ್ಲೂಕಿನಲ್ಲಿ ರಾಮಜೋಗಿಹಳ್ಳಿ ಸಹಕಾರ ಸಂಘ,

ಚಿಕ್ಕಮಧುರೆ ಸಹಕಾರ ಸಂಘ,

ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ ಸಹಕಾರ ಸಂಘ,

ಬಬ್ಬೂರು ಸಹಕಾರ ಸಂಘ,

ಮರಡಿಹಳ್ಳಿ ಸಹಕಾರ ಸಂಘ,

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಹಕಾರ ಸಂಘ,

ಹೊಸದುರ್ಗ ತಾಲ್ಲೂಕಿನಲ್ಲಿ ಹೊಸದುರ್ಗ ರೋಡ್ ಸಹಕಾರ ಸಂಘ ಹಾಗೂ

ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಟಿಎಪಿಸಿಎಂಎಸ್ ಸಹಕಾರ ಸಂಘದಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ತೆರೆಯಲು ಖರೀದಿ ಸಂಸ್ಥೆಯಾಗಿ ಚಿತ್ರದುರ್ಗ ಮಾರ್ಕ್‍ಫೆಡ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!