ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶದ ನಡುವೆ ಕೆಲವು ಜಿಲ್ಲೆಯಲ್ಲಿ ನಮ್ಗೆ ಶಿಕ್ಷಣಕ್ಕಿಂತ ಧರ್ಮವೇ ಮುಖ್ಯವೆಂದು ವಿದ್ಯಾರ್ಥಿನಿಯರು ಹಠ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಜಾಬ್ ಧರಿಸಿ ಹೋಗುವ ಆಗಿಲ್ಲ. ಹೈಕೋರ್ಟ್ ತೀರ್ಪು ನೀಡಿದೆ. ಬಲವಂತವಾಗಿ ಬರೋದಕ್ಕೆ ಪ್ರಯತ್ನ ಪಟ್ಟರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ. ಇನ್ಮುಂದೆ ಇದನ್ನೆಲ್ಲಾ ಸಹಿಸಿ ಕೂರೋದಕ್ಕೆ ಆಗಲ್ಲ.
ಕಳೆದ ಎರಡು ವರ್ಷದಿಂದ ಶಿಕ್ಷಣ ಹಾಳಾಗಿದೆ. ಈ ವರ್ಷ ಆದ್ರೂ ಶಿಕ್ಷಣ ಮುಂದುವರೆಸಲಿ. ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು. ಯಾರೋ ಆ ಮಕ್ಕಳ ತಲೆಯಲ್ಲಿ ಮತಾಂದತೆ ತುಂಬುತ್ತಿದ್ದಾರೆ. ಶಾಲೆ ಒಳಗೆ ಅಣ್ಣ ತಮ್ಮಂದಿರು ಅನ್ನೋ ಭಾವನೆ ಇರಬೇಕು. ನಾವೂ ಈ ದೇಶದ ಮಕ್ಕಳು ಎಂಬ ಭಾವನೆ ನಿರ್ಮಾಣ ಮಾಡಬೇಕು. ಈ ರೀತಿ ಆದ್ರೆ ಎಲ್ಲಿ ನಿರ್ಮಾಣ ಆಗುತ್ತೆ.
ಎಲ್ಲಿಯೂ ಪರಿಸ್ಥಿತಿ ಹದಗೆಡಲ್ಲ. ಸಾರ್ವಜನಿಕರು ಇದನ್ನ ಒಪ್ಪಲ್ಲ. ಯಾರಿಗೆ ಜಡ್ಜ್ ಮೆಂಟ್ ತೃಪ್ತಿಕರವಾಗಿಲ್ಲ, ಅವರು ಸುಪ್ರೀಂ ಕೋರ್ಟ್ ಹೋಗೋದಕ್ಕೆ ಅವಕಾಶವಿದೆ. ನಾನು ನಿನ್ನೆ ನೋಡಿದೆ. ನಂಗೆ ಶಿಕ್ಷಣಕ್ಕಿಂತ ಧರ್ಮ ಮುಖ್ಯ ಅಂತಿದ್ದಾರೆ ಮಕ್ಕಳು. ಈ ಧರ್ಮದ ಅಫೀಮನ್ನ ಯಾರು ಹಚ್ಚಿದ್ದು. ಮತಾಂಧತೆಯನ್ನ ಮಕ್ಕಳ ತಲೆಯಲ್ಲಿ ತುಂಬುವುದನ್ನ ತಪ್ಪಿಸಬೇಕು. ಆ ಸಮುದಾಯದವರೇ ಇದನ್ನ ಖಂಡಿಸಬೇಕು. ಸುಮ್ ಸುಮ್ನೆ ಶಾಂತಿ ಕದಡುವುದಕ್ಕೆ ಬಿಡೋದಿಲ್ಲ. ಪೊಲೀಸರಿದ್ದಾರೆ. ನಮ್ಮ ಎಲ್ಲಾ ಅಧಿಕಾರಿಗಳು ಫೀಲ್ಡ್ ನಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಕದಡಲು ಬಿಡೋದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.