Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ  : ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ: ಒಟ್ಟು 13,20,819 ಮತದಾರರು

---Advertisement---

ದಾವಣಗೆರೆ : ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ, ಎಸ್. ಐ. ಆರ್ ನಂತರ ದಾವಣಗೆರೆ ಜಿಲ್ಲೆಯಾದ್ಯಂತ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್. ಐ. ಆರ್ ಕುರಿತಂತೆ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಸ್. ಐ. ಆರ್ ಪ್ರಕ್ರಿಯೆ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ 1808 ಮತಗಟ್ಟೆಗಳಲ್ಲಿ 657005 ಪುರುಷ, 663734 ಮಹಿಳೆಯರು ಮತ್ತು 80 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 1320819 ಮತದಾರರಿದ್ದಾರೆ ಎಂದರು.

ಯುವ ಮತದಾರರು (18–19 ವರ್ಷ): 24,056 ಹೊಸ ಯುವ ಮತದಾರರು ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ.

ಅನುಪಾತ ವಿವರ

ಇಪಿ ಅನುಪಾತ – ಎಲೆಕ್ಟರ್ ಟು ಪಾಪ್ಯುಲೇಶನ್ ಅನುಪಾತ ಶೇ. 69ರಷ್ಟಿದೆ.  ಈ ಹಿಂದೆ ಶೇ. 73 ಇತ್ತು.  ಲಿಂಗಾನುಪಾತ: ಪ್ರತಿ 1,000 ಪುರುಷರಿಗೆ 1,010 ಮಹಿಳಾ ಮತದಾರರಿದ್ದಾರೆ.

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು: 9,638  ವಿಶೇಷ ಚೇತನ  ಮತದಾರರು: 19,916  ಸಾಗರೋತ್ತರ  ಮತದಾರರು: ಒಟ್ಟು 13 (5 ಪುರುಷರು, 8 ಮಹಿಳೆಯರು)  ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಂದರ್ಭದಲ್ಲಿ ಹೊಸ ಸೇರ್ಪಡೆಗಳು: 26,747, ತಿದ್ದುಪಡಿಗಳು 22,463,  ಹೆಸರು ತೆಗೆದುಹಾಕಿರುವ ಸಂಖ್ಯೆ  4,147 ಇದರಲ್ಲಿ ಮೃತಪಟ್ಟವರು  110, ಗೈರುಹಾಜರಿ 6, ಈಗಾಗಲೇ ನೋಂದಾಯಿತರು 42, ಶಾಶ್ವತ ಸ್ಥಳಾಂತರ 3,811, ಅನರ್ಹರು 178 ಇದ್ದು ನಿವ್ವಳ ಸೇರ್ಪಡೆ 22,600 ಮತದಾರರು.

ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲ್ಲೂಕು ಕಚೇರಿಗಳು ಹಾಗೂ ಎಲ್ಲಾ ಮತಗಟ್ಟೆ ಅಧಿಕಾರಿಗಳ  ಬಳಿ ಸಾರ್ವಜನಿಕರ ಪರಿಶೀಲನೆಗಾಗಿ ಲಭ್ಯವಿದೆ ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ECINET APP   ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ನೋಂದಾಯಿಸಿಲು ಪ್ರತಿಯೊಬ್ಬ ನಾಗರೀಕರ ಹಕ್ಕಾಗಿರುತ್ತದೆ ಈ ಸದಾವಾಕಾಶವನ್ನು ಪ್ರತಿಯೊಬ್ಬರು ತಪ್ಪದೆ  ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್‌, ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now