ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 24 : ಚಿತ್ರದುರ್ಗ -ಗೆಳೆಯರ ಬಳಗ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ದುರ್ಗದ ಸಿರಿ ಕಲಾ ಸಂಘದ ವತಿಯಿಂದ ನಮ್ಮೂರ ನೆಂಟರು ಸರಣಿ ಮಾಲಿಕೆಯಲ್ಲಿ ಈ ಬಾರಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಪತ್ರಕರ್ತರ ಭವನದಲ್ಲಿ ಅಕ್ಟೋಬರ್ 25 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಗೌರವಿಸುವ ಕಾರ್ಯಕ್ರಮದ ಸಾನಿಧ್ಯವನ್ನು ಮುರುಘಾಮಠದ ಡಾ.ಬಸವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ದುರ್ಗದ ಸಿರಿ ಕಲಾ ಸಂಘದ ಐಶ್ವರ್ಯ ಅರುಣ್ ಕುಮಾರ್, ಗೆಳೆಯರ ಬಳಗದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿನಾಯಕ ತೊಡರನಾಳ್, ರೈತ ಸಂಘದ ಮುಖಂಡ ಹಂಪಯ್ಯನಮಾಳಿಗೆ ಧನಂಜಯ ಪಾಲ್ಗೊಳ್ಳುವರು.










