ನವದೆಹಲಿ : ಕೆಲವರು ಫೋಟೋಶಾಪ್ ಅಥವಾ ಇತರ ಎಡಿಟಿಂಗ್ ಟೂಲ್‌ಗಳನ್ನು ಬಳಸಿ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ತಿದ್ದಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ನಕಲಿ ಕಾರ್ಡ್‌ಗಳ ಮೂಲಕ ಅನಧಿಕೃತವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಪ್ರಯತ್ನಗಳಿಗೂ ಕಡಿವಾಣ ಹಾಕಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸುಲಭ ಉಪಾಯವೊಂದನ್ನು ಪರಿಚಯಿಸಿದೆ. ಅದೇ ಕ್ಯೂಆರ್ ಕೋಡ್ (QR Code) ವೆರಿಫಿಕೇಶನ್ ವಿಧಾನ.
ಆಧಾರ್ ಕಾರ್ಡ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅದು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಕೆಲವೇ ಕ್ಷಣಗಳಲ್ಲಿ ಖಚಿತಪಡಿಸಿಕೊಳ್ಳಬಹುದು. ಈ ಕ್ಯೂಆರ್ ಕೋಡ್‌ನಲ್ಲಿರುವ ಮಾಹಿತಿಯು UIDAI ವತಿಯಿಂದ ಡಿಜಿಟಲ್ ಸಹಿ ಹೊಂದಿದ್ದು, ಇದನ್ನು ಯಾರಿಂದಲೂ ತಿದ್ದಲು (Tampering) ಸಾಧ್ಯವಿಲ್ಲ. ಇದಕ್ಕಾಗಿ UIDAI ಅಧಿಕೃತ ಆಧಾರ್ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಪರಿಶೀಲನಾ ಸೌಲಭ್ಯ ಒದಗಿಸಿದೆ.
Check the authenticity of Aadhaar using the Aadhaar App or myAadhaar Portal before accepting it. A quick check can make a difference.
#Aadhaar #UIDAI #VerifyAadhaar #AadhaarVerification #StayAlert pic.twitter.com/whzqTIkHMzಇದನ್ನು ಓದಿದೇಶದ ಈರುಳ್ಳಿ ಬೆಲೆಯನ್ನು ನಿರ್ಧರಿಸುವ ಶಕ್ತಿ ಈ ಊರಿನ ಕೈಯಲ್ಲಿದೆ! ಭಾರತದ ‘ಈರುಳ್ಳಿ ರಾಜಧಾನಿ’ ಯಾವುದು ಗೊತ್ತಾ?— Aadhaar (@UIDAI) October 24, 2026
ಆಧಾರ್ ಆ್ಯಪ್ ಮೂಲಕ ಪರಿಶೀಲಿಸುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್‌ನಿಂದ ಅಧಿಕೃತ ಆಧಾರ್ ಆ್ಯಪ್ ಅಥವಾ ಆಧಾರ್ ಕ್ಯೂಆರ್ ಸ್ಕ್ಯಾನರ್ ಆ್ಯಪ್ (Aadhaar QR Scanner App) ಡೌನ್‌ಲೋಡ್ ಮಾಡಿಕೊಳ್ಳಿ.
ಆ್ಯಪ್ ತೆರೆದು ಅದರಲ್ಲಿರುವ ಸ್ಕ್ಯಾನರ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಆಧಾರ್ ಕಾರ್ಡ್ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಸ್ಕ್ಯಾನ್ ಮಾಡಿದ ತಕ್ಷಣ ಕಾರ್ಡ್‌ದಾರರ ಹೆಸರು, ಜನ್ಮದಿನಾಂಕ, ವಿಳಾಸ, ಭಾವಚಿತ್ರ ಹಾಗೂ ಲಿಂಗದಂತಹ ಅಧಿಕೃತ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.
ಈ ವಿವರಗಳು ಕಾರ್ಡ್‌ನಲ್ಲಿ ಮುದ್ರಿತವಾಗಿರುವ ವಿವರಗಳೊಂದಿಗೆ ಹೊಂದಾಣಿಕೆಯಾಗದಿದ್ದರೆ, ಅದು ನಕಲಿ ಕಾರ್ಡ್ ಎಂದು ಸುಲಭವಾಗಿ ಗುರುತಿಸಬಹುದು.
UIDAI ಅಧಿಕೃತ ಪೋರ್ಟಲ್ ಮೂಲಕ ಪರಿಶೀಲನೆ
ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅಲ್ಲಿರುವ ‘ವೆರಿಫೈ ಆಧಾರ್ ನಂಬರ್’ (Verify Aadhaar Number) ಆಯ್ಕೆಯನ್ನು ಕ್ಲಿಕ್ ಮಾಡಿ.
ಕಾರ್ಡ್ ಮೇಲಿರುವ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ (Captcha) ಕೋಡ್ ಭರ್ತಿ ಮಾಡಿ ಪರಿಶೀಲನಾ ಬಟನ್ ಒತ್ತಿ.
ಕಾರ್ಡ್ ಸಕ್ರಿಯವಾಗಿದ್ದರೆ, ಆ ಸಂಖ್ಯೆಗೆ ಸಂಬಂಧಿಸಿದ ಸಾಮಾನ್ಯ ವಿವರಗಳು ತೆರೆಯ ಮೇಲೆ ಕಾಣಿಸುತ್ತವೆ.
ಒಂದು ವೇಳೆ ಡೇಟಾಬೇಸ್‌ನಲ್ಲಿ ವಿವರಗಳು ಸಿಗದಿದ್ದರೆ ಅಥವಾ ತಪ್ಪಾಗಿ ತೋರಿಸಿದರೆ ಅದು ನಕಲಿ ಕಾರ್ಡ್ ಆಗಿರಬಹುದು.
ನಕಲಿ ಆಧಾರ್ ಗುರುತಿಸಲು ಇತರ ಸುಲಭ ವಿಧಾನಗಳು
ಮುದ್ರಣದ ಗುಣಮಟ್ಟ: ಅಸಲಿ ಆಧಾರ್ ಕಾರ್ಡ್‌ಗಳಲ್ಲಿನ ರೇಖೆಗಳು ಮತ್ತು ಬಣ್ಣದ ವೃತ್ತಗಳು ಅತ್ಯಂತ ಸ್ಪಷ್ಟವಾಗಿರುತ್ತವೆ. ನಕಲಿ ಕಾರ್ಡ್‌ಗಳನ್ನು ಸಾಮಾನ್ಯವಾಗಿ ಸಾಮಾನ್ಯ ಇಂಕ್‌ಜೆಟ್ ಪ್ರಿಂಟರ್‌ಗಳಲ್ಲಿ ಮುದ್ರಿಸುವುದರಿಂದ ಅವುಗಳ ಮೇಲಿನ ರೇಖೆಗಳು ಅಸ್ಪಷ್ಟವಾಗಿರುತ್ತವೆ.
UIDAI ಲೋಗೋ: ನಕಲಿ ಕಾರ್ಡ್‌ಗಳಲ್ಲಿ UIDAI ಲೋಗೋ ಮಸುಕಾಗಿ (Blur) ಅಥವಾ ಕಳಪೆ ಗುಣಮಟ್ಟದಲ್ಲಿ ಮುದ್ರಿತವಾಗಿರುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕವೂ ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಬಹುದು.

















