ದಾವಣಗೆರೆ : ಸಿ.ಎಸ್.ಐ.ಆರ್ – ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (CFTRI), ಮೈಸೂರು ಸಂಸ್ಥೆಯು 28 ತಾಂತ್ರಿಕ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 28 ಹುದ್ದೆಗಳ ಪೈಕಿ ಫಿಟ್ಟರ್ (Fitter) ಮತ್ತು ಎಲೆಕ್ಟ್ರಾನಿಕ್ಸ್ ಮೆಕಾನಿಕ್ ವಿದ್ಯಾರ್ಹತೆ ಆಧಾರದ ಮೇಲೆ 02 ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಿರಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಮಾಜಿ ಸೈನಿಕರು ನವೆಂಬರ್ 18 ರೊಳಗೆ ಜಾಲತಾಣ : https://cftri.res.in ಅಥವಾ https://recruitment.cftri.res.in ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಇದೆ ವೆಬ್ ಸೈಟ್ ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.










