ದಾವಣಗೆರೆ: ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಯೋಜನೆಯ ಸೌಲಭ್ಯ ಪಡೆಯಲು ನೋಂದಾಯಿಸಿಕೊಂಡಿರುವ ಗ್ರಾಹಕರ ಸ್ಥಾವರಗಳ ಮರು ಪರಿಶೀಲನಾ ಪ್ರಕ್ರಿಯೆಯಲ್ಲಿ, ದಾವಣಗೆರೆ ಬೆಸ್ಕಾಂ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 9,000 ಮನೆಗಳಿಗೆ ಬೀಗ ಹಾಕಿರುವುದು ಹಾಗೂ ಮನೆಗಳು ಖಾಲಿ ಇರುವುದು ಕಂಡುಬಂದಿದೆ.
ಈ ಸ್ಥಾವರಗಳ ಮರು ಪರಿಶೀಲನಾ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಮರು ಪರಿಶೀಲನೆ ವೇಳೆ ಬೀಗ ಹಾಕಿರುವ ಹಾಗೂ ಮನೆ ಖಾಲಿ ಇರುವ ಸ್ಥಾವರಗಳ ಗ್ರಾಹಕರು ಅಕ್ಟೋಬರ್ 31, ರೊಳಗೆ ಸಂಬಂಧಪಟ್ಟ ಬೆಸ್ಕಾಂ ಉಪವಿಭಾಗ ಕಚೇರಿಗಳಿಗೆ ಖುದ್ದು ಭೇಟಿ ನೀಡಿ, ಯೋಜನೆಯ ಮರು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಂಡು ನೋಂದಾಯಿಸಿಕೊಳ್ಳುವಂತೆ ದಾವಣಗೆರೆ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.










