Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ-2026: ಮತದಾನಕ್ಕೆ 10 ಪರ್ಯಾಯ ಗುರುತಿನ ಚೀಟಿಗಳ ಬಳಕೆಗ ಅವಕಾಶ

---Advertisement---

ದಾವಣಗೆರೆ : ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2026ರ ಮತದಾನವು ಅಕ್ಟೋಬರ್ 23, 2026 ರಂದು ನಡೆಯಲಿದೆ. ಮತದಾನದ ದಿನದಂದು ಮತದಾರರು ತಮ್ಮ ಗುರುತಿಗಾಗಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯ ಬದಲಾಗಿ  10 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.

ಮತದಾನಕ್ಕೆ ಮಾನ್ಯ ಮಾಡಲಾಗುವ 10 ಪರ್ಯಾಯ ದಾಖಲೆಗಳು:

 ಆಧಾರ್ ಕಾರ್ಡ್ ,  ಚಾಲನಾ ಪರವಾನಗಿ , ಪ್ಯಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್ , ಸೇವಾ ಗುರುತಿನ ಚೀಟಿ: ರಾಜ್ಯ/ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಔದ್ಯೋಗಿಕ ಸಂಸ್ಥೆಗಳು ತಮ್ಮ ನೌಕರರಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ., ಸಂಸದರು / ಶಾಸಕರು / ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ., ಶಿಕ್ಷಣ ಸಂಸ್ಥೆಗಳ ಗುರುತಿನ ಚೀಟಿ: ಸಂಬಂಧಿಸಿದ ಶಿಕ್ಷಕರ/ಪದವೀಧರರ ಕ್ಷೇತ್ರದ ಮತದಾರರು ಉದ್ಯೋಗದಲ್ಲಿರುವ ಶಿಕ್ಷಣ ಸಂಸ್ಥೆಗಳು ನೀಡಿದ ಸೇವಾ ಗುರುತಿನ ಚೀಟಿ. ವಿಶ್ವವಿದ್ಯಾಲಯ ನೀಡಿದ ಮೂಲ ಪದವಿ / ಡಿಪ್ಲೊಮಾ ಪ್ರಮಾಣಪತ್ರ., ಸಕ್ಷಮ ಪ್ರಾಧಿಕಾರ ನೀಡಿದ ಮೂಲ ಅಂಗವಿಕಲತೆ ಪ್ರಮಾಣಪತ್ರ., ಯುಡಿಐಡಿ ಕಾರ್ಡ್ : ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿದ ವಿಶಿಷ್ಟ ಅಂಗವಿಕಲತೆಯ ಗುರುತಿನ ಚೀಟಿ.

ಸಂಬಂಧಪಟ್ಟ ಎಲ್ಲಾ ಮತದಾರರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.

Join WhatsApp

Join Now

Join Telegram

Join Now