Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬಕ್ಕೆ ಶುಭ ಕೋರಿದ ಸಿಎಂ ಡಿ.ಕೆ. ಶಿವಕುಮಾರ್

CM D.K. Shivakumar extends Vijayadashami festival wishes to all the people of the state.
---Advertisement---

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ವಿಜಯದಶಮಿ ಕೇವಲ ಹಬ್ಬವಲ್ಲ, ಅದೊಂದು ಸಂಭ್ರಮದ ಉತ್ಸವ, ಅಜ್ಞಾನದ ಕತ್ತಲನ್ನು ಸೀಳಿ ಸುಜ್ಞಾನದ ಬೆಳಕನ್ನು ಬೀರುವ ವಿಜಯದ ಪರ್ವಕಾಲ. ನವದುರ್ಗೆಯರು ಒಂಬತ್ತು ದಿನಗಳ ಕಾಲ ಒಂಬತ್ತು ರೂಪಗಳಲ್ಲಿ ಆರಾಧನೆಗೊಂಡು, ಹತ್ತನೇ ದಿನ ಜಗನ್ಮಾತೆಯಾಗಿ, ಮಹಿಷಾಸುರಮರ್ದಿನಿಯಾಗಿ ದುಷ್ಟಶಕ್ತಿಯನ್ನು ಸಂಹರಿಸಿದ ವಿಜಯದ ಸಂಕೇತವೇ ಈ ವಿಜಯದಶಮಿ.

 ಈ ಶುಭದಿನದಂದು ಚಾಮುಂಡಿ ತಾಯಿ ನಿಮ್ಮ ಮನೆ-ಮನಗಳಲ್ಲಿ ಅಷ್ಟೈಶ್ವರ್ಯಗಳನ್ನು, ಅನಂತ ಸಂತೋಷವನ್ನು ಹಾಗೂ ಉತ್ತಮ ಆರೋಗ್ಯವನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ಎಂದು ನಾಡಿನ ಜನತೆಗೆ ಶುಭ ಕೋರಿದ್ದಾರೆ.

Join WhatsApp

Join Now

Join Telegram

Join Now