ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ, ಅಕ್ಟೋಬರ್. 19 : ಅ.23 ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‍ಡಿಎ. ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಂ.ಸುರೇಶ್‍ರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಚುನಾವಣೆ ಉಸ್ತುವಾರಿ ಎಂ.ಸಿ.ರಘುಚಂದನ್ ಪದವೀಧರ ಮತದಾರರಲ್ಲಿ ವಿನಂತಿಸಿದರು.
ಅಭ್ಯರ್ಥಿ ಕೆ.ಎಂ.ಸುರೇಶ್‍ರವರ ಪರ ಹೊಳಲ್ಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮತ ಯಾಚಿಸಿ ಮಾತನಾಡಿದರು.
ಪದವೀಧರರು, ಶಿಕ್ಷಕರು, ಉಪನ್ಯಾಸಕರು, ವೈದ್ಯರು, ವಕೀಲರುಗಳು ಹೀಗೆ ಬುದ್ದಿ ಜೀವಿಗಳು ಮತದಾನ ಮಾಡುವ ಈ ಚುನಾವಣೆ ಅತ್ಯಂತ ಅಮೂಲ್ಯವಾದುದು. ಏಕೆಂದರೆ ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯುವುದರಿಂದ ಕಾರ್ಯಕರ್ತರು ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜೊತೆಗೆ ಚುನಾವಣೆಯಲ್ಲಿ ಪ್ರಜ್ಞಾವಂತರನ್ನು ಬೂತ್‍ಗೆ ಕರೆ ತಂದು ಮತ ಹಾಕಿಸಬೇಕಿದೆ ಎಂದು ಸೂಚಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ನಿರ್ಣಯ ಕೈಗೊಂಡರು ವಿಧಾನ ಪರಿಷತ್‍ನಲ್ಲಿ ಬಿಲ್ ಪಾಸ್ ಆಗಬೇಕು. ಅದಕ್ಕಾಗಿ ಬಹುಮತವಿರಬೇಕು. ಹಾಗಾಗಿ ಈ ಚುನಾವಣೆಯಲ್ಲಿ ಅಭ್ಯರ್ಥಿ ಕೆ.ಎಂ.ಸುರೇಶ್‍ರವರನ್ನು ಗೆಲ್ಲಿಸಿಕೊಳ್ಳಬೇಕು. ಚುನಾವಣೆಗೆ ಕೇವಲ ಮೂರು ದಿನಗಳ ಸಮಯಾವಕಾಶವಿರುವುದರಿಂದ ಕಾರ್ಯಕರ್ತರು
ಪದವೀಧರರನ್ನು ಸಂಪರ್ಕಿಸಿ ಮನವೊಲಿಸುವ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ.ಮಂಡಲ ಅಧ್ಯಕ್ಷ ಕುಮಾರಣ್ಣ, ಪುರಸಭೆ ಮಾಜಿ ಅಧ್ಯಕ್ಷ ಅಶೋಕ್, ಸದಸ್ಯರುಗಳಾದ ಮಲ್ಲಿಕಾರ್ಜುನ್, ಬಸಯ್ಯ, ಬಿಜೆಪಿ. ತಾಲ್ಲೂಕು ಪ್ರಧಾನ ಕಾರ್ಯದರ್ಶಿ
ಪ್ರವೀಣ್, ನ್ಯಾಯವಾದಿ ಶಿವಕುಮಾರ್, ಶಿಕ್ಷಕರುಗಳಾದ ಲೋಕೇಶ್, ತಿಪ್ಪೇಶ್, ರಾಜು, ಚಂದ್ರಮೌಳಿ ಹಾಗೂ ಪದವೀಧರ ಮತದಾರರು ಬಿಜೆಪಿ. ಮುಖಂಡರುಗಳು ಕಾರ್ಯಕರ್ತರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.












