ದಾವಣಗೆರೆ: ಸೇನಾ, ವಾಯು ಸೇನಾ ಮತ್ತು ನೌಕಾ ಸೇನಾ ವಿಭಾಗಗಳ ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಭಾರತೀಯ ರೈಲ್ವೇ ಪ್ರಾಧಿಕಾರವು ಉಚಿತ ರೈಲು ಪ್ರಯಾಣ ಸೇವೆಯನ್ನು ಆರಂಭಿಸಿದೆ.,
ಈ ಉಚಿತ ರೈಲು ಪ್ರಯಾಣಕ್ಕಾಗಿ ಪಾಸ್ಗಳನ್ನು ಪಡೆಯಲು https://irccp.indianrail.gov.in/IRCCP ಜಾಲತಾಣದಲ್ಲಿ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಿದ್ದು ನೋಂದಾಯಿತ ಫಲಾನುಭವಿಗಳು ನವೆಂಬರ್ 1 ರಿಂದ IRCTC ಪೋರ್ಟಲ್ನಲ್ಲಿ ಉಚಿತ ಪ್ರಯಾಣದ ಟಿಕೆಟ್ಗಳನ್ನು ಕಾಯ್ದಿರಿಸಬಹುದಾಗಿದೆ.
ಈ ಉಚಿತ ಪ್ರಯಾಣ ಸೇವೆಯು ಶೌರ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಅವರೊಂದಿಗೆ ಪ್ರಯಾಣಿಸುವ ಓರ್ವ ಸಂಗಾತಿಗೆ ಮಾತ್ರ ಅನ್ವಯವಾಗಲಿದೆ. ಹೆಚ್ವಿನ ಮಾಹಿತಿಗಾಗಿ 08182-220925 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.










