ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್, 09 : ಕರ್ನಾಟಕ ಸರ್ಕಾರವು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿಗಳ ಕ್ಷೇತ್ರವಾರು ಸದಸ್ಯ ಸ್ಥಾನಗಳು ಹಾಗೂ ವರ್ಗವಾರು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಈ ಅಧಿಸೂಚನೆ ಹೊರಬಿದ್ದಿದ್ದು, ಮಹಿಳೆಯರಿಗೆ ಶೇಕಡಾ 50ಕ್ಕೂ ಹೆಚ್ಚು ಪ್ರಾತಿನಿಧ್ಯ ಕಲ್ಪಿಸಲಾಗಿದೆ.
ಜಿಲ್ಲೆಯ 6 ತಾಲೂಕುಗಳಿಂದ ಒಟ್ಟು 125 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ ಬರೋಬ್ಬರಿ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಒಟ್ಟು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 30 (17 ಮಹಿಳೆ), ಪರಿಶಿಷ್ಟ ಪಂಗಡಕ್ಕೆ 22 (12 ಮಹಿಳೆ), ಹಿಂದುಳಿದ ವರ್ಗ ‘ಅ’ ಗೆ 6 (3 ಮಹಿಳೆ), ಹಿಂದುಳಿದ ವರ್ಗ ‘ಬ’ ಗೆ 2 ಸ್ಥಾನಗಳು ನಿಗದಿಯಾಗಿದ್ದು, ಸಾಮಾನ್ಯ ವರ್ಗಕ್ಕೆ 65 ಸ್ಥಾನಗಳನ್ನು (31 ಮಹಿಳೆ) ನಿಗದಿಪಡಿಸಲಾಗಿದೆ.
ತಾಲೂಕುವಾರು ಮೀಸಲಾತಿ ವಿವರ:
ಚಿತ್ರದುರ್ಗ ತಾಲೂಕು : (ಒಟ್ಟು 24 ಸ್ಥಾನಗಳು – ಮಹಿಳೆಯರಿಗೆ 12):
ಪರಿಶಿಷ್ಟ ಜಾತಿ: 7 (ಮಹಿಳೆ 4)
ಪರಿಶಿಷ್ಟ ಪಂಗಡ: 5 (ಮಹಿಳೆ 3)
ಹಿಂದುಳಿದ ವರ್ಗ ‘ಅ’ & ‘ಬ’: ಶೂನ್ಯ
ಸಾಮಾನ್ಯ: 12 (ಮಹಿಳೆ 5)
ಚಳ್ಳಕೆರೆ ತಾಲೂಕು (ಒಟ್ಟು 25 ಸ್ಥಾನಗಳು – ಮಹಿಳೆಯರಿಗೆ 13):
ಪರಿಶಿಷ್ಟ ಜಾತಿ: 5 (ಮಹಿಳೆ 3)
ಪರಿಶಿಷ್ಟ ಪಂಗಡ: 7 (ಮಹಿಳೆ 4)
ಹಿಂದುಳಿದ ವರ್ಗ ‘ಅ’ & ‘ಬ’: ಶೂನ್ಯ
ಸಾಮಾನ್ಯ: 13 (ಮಹಿಳೆ 6)
ಹಿರಿಯೂರು ತಾಲೂಕು (ಒಟ್ಟು 23 ಸ್ಥಾನಗಳು – ಮಹಿಳೆಯರಿಗೆ 12):
ಪರಿಶಿಷ್ಟ ಜಾತಿ: 6 (ಮಹಿಳೆ 3)
ಪರಿಶಿಷ್ಟ ಪಂಗಡ: 2 (ಮಹಿಳೆ 1)
ಹಿಂದುಳಿದ ವರ್ಗ ‘ಅ’: 2 (ಮಹಿಳೆ 1)
ಹಿಂದುಳಿದ ವರ್ಗ ‘ಬ’: 1 (ಮಹಿಳೆ 1)
ಸಾಮಾನ್ಯ: 12 (ಮಹಿಳೆ 6)
ಹೊಸದುರ್ಗ ತಾಲೂಕು (ಒಟ್ಟು 21 ಸ್ಥಾನಗಳು – ಮಹಿಳೆಯರಿಗೆ 11):
ಪರಿಶಿಷ್ಟ ಜಾತಿ: 5 (ಮಹಿಳೆ 3)
ಪರಿಶಿಷ್ಟ ಪಂಗಡ: 2 (ಮಹಿಳೆ 1)
ಹಿಂದುಳಿದ ವರ್ಗ ‘ಅ’: 2 (ಮಹಿಳೆ 1)
ಹಿಂದುಳಿದ ವರ್ಗ ‘ಬ’: 1 (ಮಹಿಳೆ 1)
ಸಾಮಾನ್ಯ: 11 (ಮಹಿಳೆ 5)
ಹೊಳಲ್ಕೆರೆ ತಾಲೂಕು (ಒಟ್ಟು 19 ಸ್ಥಾನಗಳು – ಮಹಿಳೆಯರಿಗೆ 10):
ಪರಿಶಿಷ್ಟ ಜಾತಿ: 5 (ಮಹಿಳೆ 3)
ಪರಿಶಿಷ್ಟ ಪಂಗಡ: 2 (ಮಹಿಳೆ 1)
ಹಿಂದುಳಿದ ವರ್ಗ ‘ಅ’: 2 (ಮಹಿಳೆ 1)
ಹಿಂದುಳಿದ ವರ್ಗ ‘ಬ’: ಶೂನ್ಯ
ಸಾಮಾನ್ಯ: 10 (ಮಹಿಳೆ 5)
ಮೊಳಕಾಲ್ಮುರು ತಾಲೂಕು (ಒಟ್ಟು 13 ಸ್ಥಾನಗಳು – ಮಹಿಳೆಯರಿಗೆ 7):
ಪರಿಶಿಷ್ಟ ಜಾತಿ: 2 (ಮಹಿಳೆ 1)
ಪರಿಶಿಷ್ಟ ಪಂಗಡ: 4 (ಮಹಿಳೆ 2)
ಹಿಂದುಳಿದ ವರ್ಗ ‘ಅ’ & ‘ಬ’: ಶೂನ್ಯ
ಸಾಮಾನ್ಯ: 7 (ಮಹಿಳೆ 4)












