ಚಿತ್ರದುರ್ಗ.ಅ.03: ಕೇಂದ್ರ ಬರ ಅಧ್ಯಯನ ತಂಡ ಅ.4 ರಂದು ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿ ಪ್ರವಾಸಕೈಗೊಳ್ಳಲಿದೆ. ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು, ಉಪನಿರ್ದೇಶಕ ಚೇತ್ ರಾಮ್ ಮೀನಾ, ಓಎಸ್‌ಡಿ ಕರ್ನಲ್ ಅಮರೇಂದ್ರ ಸಿಂಗ್, ನಿದೇರ್ಶಕ ಡಾ.ಜೆ.ಹರ್ಷ ಅವರನ್ನು ಒಳಗೊಂಡ ಅಂತರ್ ಸಚಿವಾಲಯ ತಂಡ ಬೆಳಿಗ್ಗೆ 9.40 ರಿಂದ ಹಿರಿಯೂರು ತಾಲ್ಲೂಕಿನ ಸಕ್ಕರ, ಹೊಸಕೆರೆ, ಚಳ್ಳಕೆರೆ ತಾಲ್ಲೂಕಿನ ಚಿಕ್ಕಚೆಲ್ಲೂರು ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಶೇಂಗಾ, ತೊಗರಿ, ಹೆಸರು ಬೆಳೆಗಳನ್ನು ವೀಕ್ಷಿಸಲಿದೆ. ಬೆಳಿಗ್ಗೆ 11 ಗಂಟೆಗೆ ಚಳ್ಳಕೆರೆ ತಾಲ್ಲೂಕಿನ ಪರುಶುರಾಮಪುರದಲ್ಲಿ ಸಣ್ಣ ನೀರಾವರಿ ಇಲಾಖೆ ಕೆರೆ ಹಾಗೂ ವಿಬಿ ಜಿ ರಾಮ್ ಜಿ ಅಡಿ ಕೆರೆ ಪುಶ್ಚೇತನ ಕಾಮಗಾರಿಯನ್ನು ವೀಕ್ಷಿಸಲಿದೆ. ನಂತರ ದ್ಯಾವರನಹಳ್ಳಿ ಜಿಲ್ಲಾ ಪಂಚಾಯತಿ ಕೆರೆ, ದೊಡ್ಡೇರಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಬೆಳೆ ಹಾಗೂ ರಾಣಿಕೆರೆ ಪರಿಶೀಲಿಸಲಿದೆ. ಬಳಿಕ ನಗರಂಗೆರೆಯಲ್ಲಿ ಮೇವಿನ ಮಿನಿ ಕಿಟ್ ವಿತರಿಸಲಾಗಿರುವ ರೈತರ ಜಮೀನು ಹಾಗೂ ಕುರುಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆಗೆ ಭೇಟಿ ನೀಡಲಿದೆ. ಬಳಿಕ ಚಿತ್ರದುರ್ಗ ನಗರಕ್ಕೆ ಆಗಮಿಸಿ, ದಾವಣಗೆರೆ ಜಿಲ್ಲೆಯ ಲಕ್ಕಮುತ್ತನಹಳ್ಳಿಗೆ ತೆರಳಲಿದೆ.
ದಾವಣಗೆರೆ : ಜಿಲ್ಲೆಯ ಬರಪೀಡಿತ ಪ್ರದೇಶಗಳ ಹಾಗೂ ಬೆಳೆ ಹಾನಿ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಅಂತರ-ಸಚಿವಾಲಯ ಕೇಂದ್ರ ತಂಡವು ಅಕ್ಟೋಬರ್ 04 ರಂದು ಜಿಲ್ಲೆಗೆ ಭೇಟಿ ನೀಡಲಿದೆ.
ಅಕ್ಟೋಬರ್ 04 ರಂದು ಅಪರಾಹ್ನ 3.10 ಕ್ಕೆ ತಾಲೂಕಿನ ನಿರ್ಥಡಿ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆ ಪರಿಶೀಲನೆ ಅಪರಾಹ್ನ 4.35 ಕ್ಕೆ ನ್ಯಾಮತಿ ತಾಲೂಕಿನ ಮದನಭಾವಿ ಗ್ರಾಮದಲ್ಲಿ ಕೆರೆ ವೀಕ್ಷಣೆ ಹಾಗೂ ಪರಿಶೀಲನೆ. ನಂತರ ಬರಪೀಡಿತ ಮೆಕ್ಕೆಜೋಳ ಮತ್ತು ರಾಗಿ ಬೆಳೆಗಳ ಪರಿಶೀಲನೆ – ಸಂಜೆ 5.20ಕ್ಕೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆಗಳ ಪರಿಶೀಲನೆ ಸಂಜೆ 5.40 ಕ್ಕೆ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆ ಪರಿಶೀಲನೆ ಮಾಡಲಿದ್ದಾರೆ.










