ದೇಶದ ರೈತರಿಗೆ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಸಿಗುವ ನಿರೀಕ್ಷೆ ಮೂಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣವನ್ನು ಅಕ್ಟೋಬರ್ನಲ್ಲಿ ರೈತರ ಖಾತೆಗೆ ಜಮೆ ಮಾಡುವ ಸಾಧ್ಯತೆ ಇದೆ. ಆದರೆ ಈ ಕುರಿತು ಕೇಂದ್ರ ಸರ್ಕಾರ ಇನ್ನೂ ಅಧಿಕೃತ ದಿನಾಂಕವನ್ನು ಪ್ರಕಟಿಸಿಲ್ಲ.ಈಗಾಗಲೇ ಕೇಂದ್ರ ಸರ್ಕಾರವು PM-KISAN ಯೋಜನೆಯಡಿ 23 ಕಂತುಗಳನ್ನು ರೈತರಿಗೆ ವಿತರಿಸಿದೆ. ಕಳೆದ ಜೂನ್ನಲ್ಲಿ 23ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿತ್ತು. ನಿಯಮದ ಪ್ರಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ರೈತರ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.
24ನೇ ಕಂತು ಯಾವಾಗ?
ಜೂನ್ನಲ್ಲಿ 23ನೇ ಕಂತು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ತಿಂಗಳ ಅವಧಿ ಅಕ್ಟೋಬರ್ನಲ್ಲಿ ಪೂರ್ಣಗೊಳ್ಳಲಿದೆ. ಹೀಗಾಗಿ 24ನೇ ಕಂತು ಅಕ್ಟೋಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ ನಿಖರ ದಿನಾಂಕವನ್ನು ಕೇಂದ್ರ ಸರ್ಕಾರ ಅಥವಾ ಕೃಷಿ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಬೇಕಿದೆ.
PM-KISAN ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಒಂದೇ ಬಾರಿಗೆ ನೀಡದೆ, ತಲಾ ₹2,000ರಂತೆ ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
24ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಾದರೆ ಫಲಾನುಭವಿಗಳು ಕೆಲವು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವುದು ಮುಖ್ಯ.
PM-KISAN ಪೋರ್ಟಲ್ನಲ್ಲಿ ಆಧಾರ್ ಆಧಾರಿತ e-KYC ಪೂರ್ಣಗೊಳಿಸಿರಬೇಕು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದು, DBT ಸಕ್ರಿಯವಾಗಿರಬೇಕು.
ಭೂ ದಾಖಲೆಗಳ ವಿವರಗಳು PM-KISAN ಪೋರ್ಟಲ್ನಲ್ಲಿ ಸರಿಯಾಗಿ ನವೀಕರಿಸಿರಬೇಕು.
ಫಲಾನುಭವಿಗಳು ತಮ್ಮ ಕಂತಿನ ಸ್ಥಿತಿಯನ್ನು pmkisan.gov.in ಅಧಿಕೃತ ಪೋರ್ಟಲ್ನಲ್ಲಿ ಪರಿಶೀಲಿಸಬಹುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 24ರಂದು ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಅಧಿಕೃತವಾಗಿ ಪ್ರಾರಂಭಿಸಿದರು. ಯೋಜನೆಯ ಲಾಭವನ್ನು ಡಿಸೆಂಬರ್ 1, 2018ರಿಂದ ಅನ್ವಯಿಸುವಂತೆ ಪರಿಗಣಿಸಲಾಗಿದೆ. ಅಂದಿನಿಂದ ಅರ್ಹ ರೈತರಿಗೆ ವರ್ಷಕ್ಕೆ ₹6,000ರಂತೆ ಮೂರು ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ.










