ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 01 : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಐಸಿಎಸ್ಸಿ ವಿಭಾಗದ ಹರ್ಷವರ್ಧನ್.ಎಸ್ ಇವರು ದಿನಾಂಕ 9 ರಿಂದ 15ನೇ ಅಕ್ಟೋಬರ್ 2026ರವರೆಗೆ ನಡೆಯಲಿರುವ “ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಷ್ಟ್ರೀಯ ಇನ್ನೋವೇಷನ್ ಫೌಂಡೆಷನ್ ಸಹಯೋಗದಲ್ಲಿ ವಸ್ತು ಪ್ರದರ್ಶನವನ್ನು ದೆಹಲಿಯಲ್ಲಿ ಆಯೋಜಿಸಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಿಂದ ನಮ್ಮ ಶಾಲೆಯು ವಿದ್ಯಾರ್ಥಿಯಾದ ಹರ್ಷವರ್ಧನ್.ಎಸ್ ಆಯ್ಕೆಯಾಗಿದ್ದಾರೆ.
“ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ವಿಜ್ಞಾನ ವಸ್ತು ಪ್ರದರ್ಶನ 2026ಕ್ಕೆ “ಕೃಷಿ 2.0 ಬಹುಪಯೋಗಿ ಆಧುನಿಕ ಎತ್ತಿನ ಗಾಡಿ” [[Krushi 2.0 Versatile and Modern Bullock cart]] ಎಂಬ ಶೀರ್ಷಿಕೆಯ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಲು ಹರ್ಷವರ್ಧನ್.ಎಸ್ ಅವರು ಆಯ್ಕೆಯಾಗಿರುತ್ತಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲೆಯ ವಿದ್ಯಾರ್ಥಿಯಾದ ಹರ್ಷವರ್ದನ್.ಎಸ್ ಹಾಗೂ ಮಾರ್ಗದರ್ಶಿ ಶಿಕ್ಷಕರುಗಳಾದ ಆಶಾ.ಸಿ.ಹೆಚ್.ಎಮ್. ಮತ್ತು ಶ್ರೀನಿಧಿ ಬಿ ಅವರುಗಳಿಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ, ಶ್ರೀ.ಎಸ್.ಎಂ ಪೃಥ್ವೀಶ ಹಾಗೂ ನಿರ್ದೇಶಕರಾದ ಶ್ರೀಮತಿ ಸುನಿತಾ.ಪಿ.ಸಿ, ಐಸಿಎಸ್ಇ ಪ್ರಾಚಾರ್ಯರಾದ ಬೀನಾ ಎ ಜಾನ್, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.










