ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯ ಆಧಾರದ ಮೇಲೆ ಪ್ರತಿ ದಿನದ ರಾಶಿಫಲಗಳು ಬದಲಾಗುತ್ತಿರುತ್ತವೆ. ಇಂದು ಅಕ್ಟೋಬರ್ 1, 2026 ಗುರುವಾರ. ಹಿಂದೂ ಧರ್ಮದಲ್ಲಿ ಗುರುವಾರವನ್ನು ಶ್ರೀ ಮಹಾವಿಷ್ಣುವಿನ ಆರಾಧನೆಗೆ ಮೀಸಲಿಡಲಾಗಿದೆ. ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ಸಕಲ ಸಂಪತ್ತು, ಧನ-ಧಾನ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇಂದಿನ ಗ್ರಹಗಳ ಚಲನೆಯಂತೆ ಕೆಲವು ರಾಶಿಗಳಿಗೆ ಉತ್ತಮ ಆರ್ಥಿಕ ಲಾಭ ಹಾಗೂ ಶುಭವಾರ್ತೆಗಳು ಸಿಗಲಿದ್ದರೆ, ಇನ್ನು ಕೆಲವು ರಾಶಿಯವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
12 ರಾಶಿಗಳ ಇಂದಿನ ಭವಿಷ್ಯದ ವಿವರ ಹೀಗಿದೆ:
ಮೇಷ ರಾಶಿ:

ಇಂದು ಪ್ರೇಮ ಜೀವನದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರಲಿವೆ. ಅವಿವಾಹಿತರ ಜೀವನಕ್ಕೆ ಹೊಸ ವ್ಯಕ್ತಿಯ ಆಗಮನವಾಗುವ ಬಲವಾದ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿಗಳನ್ನು ನಿಭಾಯಿಸುವಾಗ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಸಾಕಷ್ಟು ನೀರು ಕುಡಿಯುವ ಮೂಲಕ ಆರೋಗ್ಯದ ಕಡೆ ಗಮನಹರಿಸಿ.
ವೃಷಭ ರಾಶಿ:
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ; ಇಲ್ಲದಿದ್ದರೆ ಅನಗತ್ಯ ಕಲಹಗಳು ಉಂಟಾಗಬಹುದು. ಕುಟುಂಬ ಸದಸ್ಯರಿಗೆ ಹಣಕಾಸಿನ ನೆರವು ನೀಡಬೇಕಾಗಿ ಬರಬಹುದು, ಇದು ನಿಮ್ಮ ವೈಯಕ್ತಿಕ ಬಜೆಟ್ ಮೇಲೆ ಪರಿಣಾಮ ಬೀರಬಹುದು. ಆದರೆ ದಿನವು ಉತ್ಸಾಹ ಹಾಗೂ ರೊಮ್ಯಾಂಟಿಕ್ ಆಗಿ ಕಳೆಯಲಿದೆ.
ಮಿಥುನ ರಾಶಿ:
ಉದ್ಯೋಗ ಅಥವಾ ವ್ಯಾಪಾರ ನಿಮಿತ್ತ ಪ್ರಯಾಣ ಕೈಗೊಳ್ಳಬೇಕಾಗಬಹುದು. ಕೆಲಸದ ಒತ್ತಡ ಹೆಚ್ಚೆನಿಸಿದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಇಂದು ಮಿಶ್ರಫಲಗಳು ಕಂಡುಬರಲಿವೆ. ಜೀವನ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಯಿರುವುದರಿಂದ ಸಂಯಮದಿಂದ ವರ್ತಿಸಿ.
ಕಟಕ ರಾಶಿ:
ಆರ್ಥಿಕ ಪರಿಸ್ಥಿತಿಯ ಮೇಲೆ ವಿಶೇಷ ಗಮನ ಹರಿಸಬೇಕಾದ ಸಮಯ. ಇತರರ ಬಗ್ಗೆ ಹೆಚ್ಚು ಯೋಚಿಸುವ ಬದಲು ನಿಮ್ಮ ಸ್ವಂತ ಯೋಗಕ್ಷೇಮಕ್ಕೆ (ಸೆಲ್ಫ್ ಲವ್) ಆದ್ಯತೆ ನೀಡಿ. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಉತ್ತಮ. ಹಣಕಾಸಿನ ಏರಿಳಿತಗಳ ಸಾಧ್ಯತೆ ಇರುವುದರಿಂದ ಯೋಚಿಸಿ ಖರ್ಚು ಮಾಡಿ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ವಿಶೇಷವಾದ ದಿನ. ಸಂಜೆಯ ವೇಳೆ ಪ್ರಿಯಕರ ಅಥವಾ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಬೇಡ. ಶಾಪಿಂಗ್ ಮಾಡುವಾಗ ಅಥವಾ ಹಣ ವ್ಯಯಿಸುವಾಗ ಜಾಗರೂಕರಾಗಿರಿ.
ಕನ್ಯಾ ರಾಶಿ:
ಉದ್ಯೋಗದಲ್ಲಿ ನಿಮ್ಮ ಕಾರ್ಯವೈಖರಿಗೆ ತಕ್ಕ ಮನ್ನಣೆ ದೊರೆತು ಉತ್ಸಾಹ ಹೆಚ್ಚಲಿದೆ. ಆದರೆ ನಿಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನ ಅಗತ್ಯ. ಹೊರಗಿನ ಜಂಕ್ ಫುಡ್ ಸಂಪೂರ್ಣವಾಗಿ ತ್ಯಜಿಸಿ. ವೈಯಕ್ತಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ನೆಲೆಸಲಿದೆ.
ತುಲಾ ರಾಶಿ:
ಆರ್ಥಿಕವಾಗಿ ಬಲಿಷ್ಠವಾದ ದಿನ. ಅನಿರೀಕ್ಷಿತ ಧನಲಾಭವಾಗುವ ಯೋಗವಿದೆ. ಆದರೆ ಅದೇ ಪ್ರಮಾಣದಲ್ಲಿ ಖರ್ಚುಗಳೂ ಹೆಚ್ಚಾಗಲಿವೆ. ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಿ ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ. ಆಫೀಸ್‌ನ ಒತ್ತಡವನ್ನು ಮನೆಗೆ ತರಬೇಡಿ.
ವೃಶ್ಚಿಕ ರಾಶಿ:
ಪ್ರಯಾಣ ಮಾಡುವಾಗ ಅಥವಾ ವಾಹನ ಚಾಲನೆ ಮಾಡುವಾಗ ಅತ್ಯಂತ ಎಚ್ಚರಿಕೆ ವಹಿಸಿ. ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಮೇಲಧಿಕಾರಿಗಳು ಗುರುತಿಸಲಿದ್ದಾರೆ. ಆರ್ಥಿಕ ಲಾಭದ ಸೂಚನೆಗಳಿವೆ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು.

ಧನು ರಾಶಿ:
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಪ್ರೇಮ ಜೀವನದಲ್ಲಿ ಸಂಗಾತಿಗೆ ಸಾಕಷ್ಟು ಸಮಯ ನೀಡುವುದು ಬಹಳ ಮುಖ್ಯ. ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡಿ. ದಿನದ ಕೊನೆಯಲ್ಲಿ ಶುಭಸುದ್ದಿಯೊಂದು ಕೇಳಿಬರುವ ಸಾಧ್ಯತೆಯಿದೆ.
ಮಕರ ರಾಶಿ:
ಆರೋಗ್ಯ ಉತ್ತಮವಾಗಿರಲಿದೆ, ಆದರೂ ಹೊರಗಿನ ಆಹಾರ ಸೇವನೆ ಮಾಡದಿರುವುದು ಒಳ್ಳೆಯದು. ಆರ್ಥಿಕವಾಗಿ ಅತ್ಯಂತ ಲಾಭದಾಯಕ ದಿನ. ಹೊಸ ಯೋಜನೆಗಳು ಕೈಸೇರುವುದರಿಂದ ಅನಿರೀಕ್ಷಿತ ಧನಲಾಭ ಉಂಟಾಗಲಿದೆ.
ಕುಂಭ ರಾಶಿ:
ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಕೆಲವು ಪ್ರಮುಖ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಸಕಾರಾತ್ಮಕ ಚಿಂತನೆಗಳಿಂದ ಕೂಡಿರಿ. ಆಕಸ್ಮಿಕವಾಗಿ ಧನಲಾಭವಾಗುವ ಬಲವಾದ ಸಾಧ್ಯತೆಗಳಿವೆ.
ಮೀನ ರಾಶಿ:
ನಿಮ್ಮಲ್ಲಿ ಆತ್ಮವಿಶ್ವಾಸ ಗಣನೀಯವಾಗಿ ಹೆಚ್ಚಲಿದೆ. ಆತುರದಿಂದ ಖರ್ಚು ಮಾಡುವ ಬದಲು ಸರಿಯಾದ ಯೋಜನೆಯೊಂದಿಗೆ ಮುನ್ನಡೆಯಿರಿ. ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಅಗತ್ಯ. ಈ ಹಿಂದೆ ಮಾಡಿದ ಹೂಡಿಕೆಗಳಿಂದ ಅನಿರೀಕ್ಷಿತವಾಗಿ ಉತ್ತಮ ಲಾಭ ದೊರೆಯಲಿದೆ. ದಿನವು ಅತ್ಯಂತ ಉತ್ಸಾಹಭರಿತವಾಗಿ ಸಾಗಲಿದೆ.















