ಐಚಿ-ನಗೋಯಾ (ಜಪಾನ್): ಜಪಾನ್ನಲ್ಲಿ ನಡೆಯುತ್ತಿರುವ 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಶೂಟರ್ಗಳು ಅಮೋಘ ಪ್ರದರ್ಶನ ನೀಡಿದ್ದು, ಮಂಗಳವಾರ ನಡೆದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಇದೇ ವೇಳೆ ಭಾರತದ ನೀರು ಧಂಡಾ ವೈಯಕ್ತಿಕ ವಿಭಾಗದ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಭಾರತದ ನೀರು ಧಂಡಾ (118), ಆಶಿಮಾ ಅಹ್ಲಾವತ್ (106) ಮತ್ತು ಮನೀಶಾ ಕೀರ್ (104) ಅವರನ್ನೊಳಗೊಂಡ ತ್ರಿವಳಿ ಪಡೆ ಒಟ್ಟು 328 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ರಜತ ಪದಕಕ್ಕೆ ಕೊರಳು ಹಾಕಿತು. 346 ಅಂಕ ಕಲೆಹಾಕಿದ ಚೀನಾ ಚಿನ್ನದ ಪದಕ ಗೆದ್ದರೆ, ಕುವೈತ್ (325) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಒಟ್ಟು 27 ಶೂಟರ್ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ ಭಾರತದ ಆಶಿಮಾ 16ನೇ ಸ್ಥಾನ ಪಡೆದರೆ, ಮನೀಶಾ 23ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರು ಧಂಡಾ ಅವರ ವೈಯಕ್ತಿಕ ವಿಭಾಗದ ಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ನಡೆಯಲಿದೆ.
SILVER FOR INDIA IN WOMEN’S TRAP! 🥈🇮🇳
Neeru, Aashima Ahlawat and Manisha Keer win Silver Medal in the Women’s Trap Team event at the Asian Games 2026!
Neeru | 118 | Joint 1st
Ashima Ahlawat | 106 | 16th
Manisha Keer | 104 | 23rdWELL DONE GIRLS! 🙌 pic.twitter.com/UuPC9cN2yM
— The Khel India (@TheKhelIndia) September 29, 2026













