Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ದಿನಾಂಕ ಘೋಷಿಸಿದ ವಿರಾಟ್ ಕೊಹ್ಲಿ.!

---Advertisement---

ಮುಂಬೈ : ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಭಾರತ ತಂಡದ ಪರ ತಮ್ಮ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಭಾರತೀಯ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಮುನ್ನ ಮಾತನಾಡಿರುವ ಕೊಹ್ಲಿ, ಮುಂಬರುವ ವಿಶ್ವಕಪ್ ಅನ್ನು ಗೆಲ್ಲುವುದೇ ತಮ್ಮ ಪ್ರಮುಖ ಗುರಿಯಾಗಿದ್ದು, ಇದಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಜಿಯೋಸ್ಟಾರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ಭಾರತದ ಪರ ನಾನು ಆಡುತ್ತಿರುವ ಕೊನೆಯ ವಿಶ್ವಕಪ್ ಇದಾಗಿದ್ದು, ಮೈದಾನದಲ್ಲಿ ನನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಲು ಇದೇ ನನಗೆ ದೊಡ್ಡ ಪ್ರೇರಣೆಯಾಗಿದೆ. ಭಾರತಕ್ಕೆ ವಿಶ್ವಕಪ್ ಟ್ರೋಫಿ ತಂದುಕೊಡುವುದೇ ನಮ್ಮ ಅಂತಿಮ ಗುರಿ, ಅದಕ್ಕಾಗಿ ಏನೇ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ” ಎಂದು ತಮ್ಮ ದೃಢ ಸಂಕಲ್ಪವನ್ನು ಹೊರಹಾಕಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದು, 2023ರಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದ ಕೊಹ್ಲಿ, ತಮ್ಮ ಏಕದಿನ ವಿಶ್ವಕಪ್ ಪಯಣವನ್ನು ಅದ್ಧೂರಿಯಾಗಿ ಮುಗಿಸುವ ಆಶಯ ಹೊಂದಿದ್ದಾರೆ.

2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಚುಟುಕು ಕ್ರಿಕೆಟ್‌ಗೆ ಹಾಗೂ 2025ರ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕೊಹ್ಲಿ, ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಸೆಪ್ಟೆಂಬರ್ 27ರ ಭಾನುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯು 2027ರ ವಿಶ್ವಕಪ್‌ಗೆ ಭಾರತದ ಪೂರ್ವಸಿದ್ಧತೆಯ ಮೊದಲ ಹೆಜ್ಜೆಯಾಗಿದೆ. 314 ಏಕದಿನ ಪಂದ್ಯಗಳಲ್ಲಿ 54 ಶತಕಗಳ ನೆರವಿನಿಂದ 14,941 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಅವರ ಈ ನಿರ್ಧಾರ ಹಾಗೂ ಬದ್ಧತೆಯು, ಮುಂಬರುವ ಮಹತ್ವದ ಟೂರ್ನಿಗೆ ಭಾರತ ತಂಡದ ಆತ್ಮವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಿದೆ.

Join WhatsApp

Join Now

Join Telegram

Join Now