Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING : ಏಷ್ಯನ್ ಗೇಮ್ಸ್ 2026 : ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತ ಸುರುಚಿ–ಕಮಲ್‌ಜೀತ್ ಗೆ ಚಿನ್ನ.!

---Advertisement---

ದೆಹಲಿ: ಏಷ್ಯನ್ ಗೇಮ್ಸ್ 2026ರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ಸುರುಚಿ ಸಿಂಗ್ ಮತ್ತು ಕಮಲ್‌ಜೀತ್ ಜೋಡಿ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.

ಶುಕ್ರವಾರ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಒಟ್ಟು 484.6 ಅಂಕಗಳನ್ನು ಕಲೆಹಾಕಿದ ಈ ಜೋಡಿ, ಹಳದಿ ಪದಕವನ್ನು ಗೆಲ್ಲುವುದರ ಜೊತೆಗೆ ನೂತನ ಏಷ್ಯನ್ ದಾಖಲೆಯನ್ನು ನಿರ್ಮಿಸಿತು. ಪ್ರಸ್ತುತ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ ಎರಡನೇ ಚಿನ್ನದ ಪದಕ ಇದಾಗಿದ್ದು, ಇದಕ್ಕೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಮೊದಲ ಚಿನ್ನದ ಬೇಟೆಯಾಡಿತ್ತು.

ವೈಯಕ್ತಿಕ ವಿಭಾಗಗಳಲ್ಲಿ ನಿರಾಸೆ ಅನುಭವಿಸಿದ್ದ ಸುರುಚಿ ಮತ್ತು ಕಮಲ್‌ಜೀತ್, ಮಿಶ್ರ ತಂಡ ಸ್ಪರ್ಧೆಯಲ್ಲಿ ಅಮೋಘ ಕಮ್‌ಬ್ಯಾಕ್ ಮಾಡಿದರು. ಅರ್ಹತಾ ಸುತ್ತಿನಲ್ಲಿ ಆರಂಭದಿಂದಲೇ ಪಾರಮ್ಯ ಮೆರೆದ ಈ ಜೋಡಿ ಮೊದಲ ಸರಣಿಯಲ್ಲಿ 196 ಅಂಕ, ಎರಡನೇ ಸರಣಿಯಲ್ಲಿ 195 ಅಂಕ ಗಳಿಸಿ ಒಟ್ಟು 391 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತ್ತು. ಅಂತಿಮವಾಗಿ ಮೂರನೇ ಸರಣಿಯಲ್ಲಿ ಮತ್ತೆ 196 ಅಂಕಗಳನ್ನು ಪೇರಿಸಿ, 29 ‘ಇನ್ನರ್ 10’ಗಳೊಂದಿಗೆ ಒಟ್ಟಾರೆ 587 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿತ್ತು.

Join WhatsApp

Join Now

Join Telegram

Join Now