Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಸೆಪ್ಟೆಂಬರ್ 22 ರಂದು ವಾಹನ ಸಂಚಾರ ಮಾರ್ಗ ಬದಲಾವಣೆ : ಇಲ್ಲಿದೆ ಮಾಹಿತಿ..!

---Advertisement---

 

ದಾವಣಗೆರೆ ಸೆ.21: ನಗರದ ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್‌ 22 ರಂದು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಕಲಂ 31 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.

 

ಸಂಚಾರ ಮಾರ್ಗಗಳ ವಿವರ:
ಹರಿಹರ ಕಡೆಯಿಂದ ಬರುವ ವಾಹನಗಳು:

ಸರಕು ಲಾರಿಗಳು: ಹರಿಹರದಿಂದ ದಾವಣಗೆರೆಗೆ ಹಳೆ ಪಿ.ಬಿ. ರಸ್ತೆ ಮುಖಾಂತರ ಬರುವ ಲಾರಿಗಳು ಹರಿಹರ ನಗರದಿಂದಲೇ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌.ಹೆಚ್-48 ರಸ್ತೆ ಮೂಲಕ ಆವರಗೆರೆ ಹತ್ತಿರದ ಬಾಡಾ ಕ್ರಾಸ್, ಡಿಸಿಎಂ ಅಂಡರ್ ಪಾಸ್ ಹಾಗೂ ಧನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ತೆರಳುವುದು.

ಕೆ.ಎಸ್.ಆರ್.ಟಿ.ಸಿ ಬಸ್‌ಗಳು: ಮೇಲ್ಕಂಡ ಮಾರ್ಗದಲ್ಲೇ ಬಾಡಾ ಕ್ರಾಸ್ ಹಾಗೂ ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸುವುದು.

ಖಾಸಗಿ ಬಸ್‌ಗಳು: ಮೇಲ್ಕಂಡ ಮಾರ್ಗವಾಗಿ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಎಂ.ಜಿ. ಸರ್ಕಲ್ ಮುಖಾಂತರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು, ಹರಿಹರದ ಕಡೆಗೆ ಚಲಿಸದೆ ಪುನಃ ಅದೇ ಮಾರ್ಗದಲ್ಲಿ ಹೋಗುವುದು.

ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳು:
ಸರಕು ಲಾರಿಗಳು: ಡಿಸಿಎಂ ಅಂಡರ್ ಪಾಸ್ ಹತ್ತಿರದ ಧನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ತೆರಳುವುದು.

ಕೆ.ಎಸ್.ಆರ್.ಟಿ.ಸಿ ಬಸ್‌ಗಳು: ಬಾಡಾ ಕ್ರಾಸ್ ಮತ್ತು ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸುವುದು.

ಖಾಸಗಿ ಬಸ್‌ಗಳು: ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಎಂ.ಜಿ. ಸರ್ಕಲ್ ಮುಖಾಂತರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು, ಹರಿಹರದ ಕಡೆಗೆ ಚಲಿಸದೆ ಮೇಲ್ಕಂಡ ಮಾರ್ಗದಲ್ಲಿಯೇ ವಾಪಸ್ ಹೋಗುವುದು.

ಲಾರಿಗಳ ಪಾರ್ಕಿಂಗ್ ವ್ಯವಸ್ಥೆ:

ಜಿ.ಎಂ.ಐ.ಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆ ಬದಿಯಲ್ಲಿ ನಿಲ್ಲಿಸುವಂತಹ ಗೂಡ್ಸ್ ಲಾರಿಗಳನ್ನು ಹಳೆ ಪಿ.ಬಿ. ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಬಾರದು. ಅವುಗಳನ್ನು ದೂರದಲ್ಲಿ ನಿಲ್ಲಿಸಲು ಖಾಸಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗಿ ಲಾರಿ ಮಾಲೀಕರ ಸಂಘ ಹಾಗೂ ಆರ್‌.ಟಿ.ಒ ಅಧಿಕಾರಿಗಳು ಮಾಡಿಕೊಳ್ಳತಕ್ಕದ್ದು.

ಖಾಸಗಿ ಬಸ್‌ಗಳ ನಿರ್ಗಮನ:

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳುವ ಬಸ್‌ಗಳು ಎ.ಸಿ. ಕಚೇರಿ ಸರ್ಕಲ್, ಅರುಣ ಸರ್ಕಲ್ ಮುಖಾಂತರ ಹರಿಹರದ ಕಡೆಗೆ ಹಳೆ ಪಿ.ಬಿ. ರಸ್ತೆಗೆ ಬಾರದೇ ಗಾಂಧಿ ಸರ್ಕಲ್ ಮೂಲಕ ಹಡಡಿ ರಸ್ತೆ/ಆವರಗೆರೆ ಕಡೆಗೆ ಹೋಗುವುದು.

ನಗರದೊಳಗಿನ ಸಂಚಾರ ನಿಷೇಧ:

ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಇರುವುದರಿಂದ ಬೆಳಿಗ್ಗೆ 11.00 ರಿಂದ ರಾತ್ರಿ 11.00 ಗಂಟೆಯವರೆಗೆ ಖಾಸಗಿ ಸಿಟಿ ಬಸ್‌ಗಳು, ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಹಾಗೂ ಸರಕು ಲಾರಿಗಳು ಮೆರವಣಿಗೆ ಸಾಗುವ ಹಳೆ ಪಿ.ಬಿ. ರಸ್ತೆಯಲ್ಲಿ (ಅಂದರೆ ಎಂ.ಜಿ. ಸರ್ಕಲ್‌ನಿಂದ ಭಾತಿ ಕೆರೆಯವರೆಗೆ) ಸಂಚರಿಸದಂತೆ ನಿಷೇಧಿಸಲಾಗಿದೆ.

 

ಈ ವಾಹನ ಸಂಚಾರ ಮಾರ್ಗ ಬದಲಾವಣೆ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಅಗತ್ಯವಾದ ಸೂಚನಾ ಫಲಕಗಳನ್ನು ಮೇಲ್ಕಂಡ ಸ್ಥಳಗಳಲ್ಲಿ ಅಳವಡಿಸಲು ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now